ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮದುವೆಯ ವಿಚಾರಕ್ಕೆ ಗಲಾಟೆ- 15ವರ್ಷದ ಮಗಳನ್ನು ಗುಂಡಕ್ಕಿ ಹತ್ಯೆಗೈದ ತಾಯಿ

12:10 PM Jan 08, 2024 IST | Bcsuddi
Advertisement

ಬೊಕಾರೊ: ಮನೆಯಲ್ಲಿ ಮದುವೆ ವಿಚಾರದಲ್ಲಿ ನಡೆದ ಗಲಾಟೆಯ ಬಳಿಕ ತಾಯಿ ತನ್ನ 15 ವರ್ಷದ ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ಬಾಗೋದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

Advertisement

ಮೂಲಗಳ ಪ್ರಕಾರ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆ ತನ್ನ ಮಗಳ ತಲೆಗೆ ಹತ್ತಿರದಿಂದಲೇ ಗುಂಡು ಹಾರಿಸಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಳಿಕ ಮಗಳನ್ನು ಗುಂಡಿಕ್ಕಿ ಕೊಂದಿರುವುದಾಗಿ ಆರೋಪಿ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ವಶಕ್ಕೆ ಪಡೆದಿದ್ದಾರೆ.

ತನಿಖೆ ವೇಳೆ ಬಾಲಕಿಯ ಮದುವೆಯನ್ನು ಆಕೆಯ ಪೋಷಕರು ನಿಶ್ಚಯಿಸಿದ್ದು, ಆದರೆ ಆಕೆ ತನ್ನದೇ ಗ್ರಾಮದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಆಕೆಯ ಪೋಷಕರು ಆಯ್ಕೆ ಮಾಡಿದ ಹುಡುಗನನ್ನು ಮದುವೆಯಾಗಲು ಅವಳಿಗೆ ಇಷ್ಟವಿರಲಿಲ್ಲ. ಹೀಗಾಗಿ ತಾಯಿ ಅವಳನ್ನು ಕೊಂದಿದ್ದಾಳೆ ಎಂದು ಎಸ್ಪಿ ದೀಪಕ್ ಕುಮಾರ್ ಶರ್ಮಾ ಹೇಳಿದರು.

Advertisement
Next Article