For the best experience, open
https://m.bcsuddi.com
on your mobile browser.
Advertisement

ಮತ್ತೊಂದು ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ- 12 ಗಂಟೆಗಳಲ್ಲಿ 2ನೇ ಅಗ್ನಿ ಅವಘಡ..!

12:28 PM Nov 16, 2023 IST | Bcsuddi
ಮತ್ತೊಂದು ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ  12 ಗಂಟೆಗಳಲ್ಲಿ 2ನೇ ಅಗ್ನಿ ಅವಘಡ
Advertisement

ಲಕ್ನೋ: ಉತ್ತರ ಪ್ರದೇಶದ ಇಟಾವಾದಲ್ಲಿ ದೆಹಲಿ-ಸಹರ್ಸಾ ವೈಶಾಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಪ್ಯಾಂಟ್ರಿ ಪಕ್ಕದ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 19 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನವದೆಹಲಿ-ದರ್ಭಾಂಗಾ ಎಕ್ಸ್‌ಪ್ರೆಸ್ ರೈಲಿಗೆ ಬುಧವಾರ ಬೆಂಕಿ ಹೊತ್ತಿಕೊಂಡ ನಂತರ 12 ಗಂಟೆಗಳಲ್ಲಿ ಜಿಲ್ಲೆಯಲ್ಲಿ ನಡೆದ ಇಂತಹ ಎರಡನೇ ಘಟನೆಯಾಗಿದೆ. ಗುರುವಾರ ನಸುಕಿನಲ್ಲಿ ದೆಹಲಿ-ಸಹರ್ಸಾ ವೈಶಾಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಉತ್ತರ ಪ್ರದೇಶದ ಇಟಾವಾ ಬಳಿ 10 ಗಂಟೆಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ಘಟನೆಯಾಗಿದೆ. ಎಸ್ -6 ಕೋಚ್‌ನಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 19 ಪ್ರಯಾಣಿಕರು ಗಾಯಗೊಂಡಿದ್ದು, 11 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.

Advertisement
Author Image

Advertisement