ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮತಗಟ್ಟೆ ಸಮೀಕ್ಷೆ ಹಿನ್ನೆಲೆ ದಾಖಲೆಯ ಏರಿಕೆ ಕಂಡ ಸೆನ್ಸೆಕ್ಸ್- ನಿಫ್ಟಿ

12:09 PM Jun 03, 2024 IST | Bcsuddi
Advertisement

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಗೆಲ್ಲಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿದ ಬೆನ್ನಲ್ಲೇ ಇಂದಿನ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳು ಭಾರೀ ಏರಿಕೆ ಕಂಡಿದೆ.

Advertisement

ಇಂದಿನ ಆರಂಭಿಕ ವಹಿವಾಟಿನಲ್ಲೇ ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 30 ಷೇರುಗಳ ಸೆನ್ಸೆಕ್ಸ್ ಮತ್ತು 50 ಷೇರುಗಳ ನಿಫ್ಟಿಯ ಎಲ್ಲಾ ಷೇರುಗಳು ಏರಿಕೆ ಕಂಡಿವೆ.

ಬಿಎಸ್‌ಇ ಸೆನ್ಸೆಕ್ಸ್ 2,622 ಪಾಯಿಂಟ್‌ಗಳಷ್ಟು ಅಥವಾ ಶೇಕಡ 3.75ರಷ್ಟು ಏರಿದೆ. ದಾಖಲೆಯ 76,738.89ರಲ್ಲಿ ವಹಿವಾಟು ಪ್ರಾರಂಭಿಸಿದೆ. ಎನ್‌ಎಸ್‌ಇ ನಿಫ್ಟಿ 807 ಪಾಯಿಂಟ್‌ಗಳಷ್ಟು ಏರಿಕೆ ಕಂಡು ದಾಖಲೆಯ 23,338.70 ರಲ್ಲಿ ವಹಿವಾಟು ಪ್ರಾರಂಭಿಸಿದೆ.

ಇನ್ನು ಸೆನ್ಸೆಕ್ಸ್ ಷೇರುಗಳಾದ ಪವರ್ ಗ್ರಿಡ್, ಎನ್‌ಟಿಪಿಸಿ, ಲಾರ್ಸನ್ ಅಂಡ್ ಟೌಬೊ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೆನ್ಸೆಕ್ಸ್ ನಲ್ಲಿ ಮುನ್ನುಗ್ಗಿದ್ದು, ದಾಖಲೆಯ ಗಳಿಕೆ ದಾಖಲಿಸಿದೆ.

 

Advertisement
Next Article