For the best experience, open
https://m.bcsuddi.com
on your mobile browser.
Advertisement

ಮತಕ್ಕಾಗಿ ಲಂಚ: ಸಂಸದರು, ಶಾಸಕರಿಗೆ ಶಿಕ್ಷೆಯಿಂದ ವಿನಾಯಿತಿ ಇಲ್ಲ- ಸುಪ್ರೀಂ ತೀರ್ಪು

03:32 PM Mar 04, 2024 IST | Bcsuddi
ಮತಕ್ಕಾಗಿ ಲಂಚ  ಸಂಸದರು  ಶಾಸಕರಿಗೆ ಶಿಕ್ಷೆಯಿಂದ ವಿನಾಯಿತಿ ಇಲ್ಲ  ಸುಪ್ರೀಂ ತೀರ್ಪು
Advertisement

ನವದೆಹಲಿ: ಭಾಷಣಕ್ಕಾಗಿ ಲಂಚ ಪ್ರಕರಣಗಳಲ್ಲಿ ಸಂಸದರು ಮತ್ತು ಶಾಸಕರಿಗೆ ಶಿಕ್ಷೆಯಿಂದ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್‌ ನ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್‌ನ ಸಿಜೆಐ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ತೀರ್ಪನ್ನು ನೀಡಿದೆ. 1998ರ ಜೆಎಂಎಂ ಲಂಚ ಹಗರಣದ ಭಾಷಣಕ್ಕಾಗಿ ಅಥವಾ ಮತಕ್ಕಾಗಿ ಲಂಚ ಪಡೆಯುವ ಸಂಸದರು, ಶಾಸಕರು ಪ್ರಕರಣದಲ್ಲಿನ ಪಂಚ ಸದಸ್ಯರ ಸಾಂವಿಧಾನಿಕ ಪೀಠದ ತೀರ್ಪನ್ನು  ಸರ್ವಾನುಮತದಿಂದ ರದ್ದು ಮಾಡಿರುವುದಾಗಿ ಪೀಠ ತಿಳಿಸಿದೆ.

ಸಂಸತ್ನ ಲ್ಲಿ ಭಾಷಣ ಮಾಡಲು ಅಥವಾ ಮತದಾನ ಮಾಡಲು ಲಂಚ ಪಡೆದ ಶಾಸಕರಿಗೆ ಜೆಎಂಎಂ ಪ್ರಕರಣದ ತೀರ್ಪಿನಲ್ಲಿ ಕಾನೂನು ಕ್ರಮದಿಂದ ವಿನಾಯ್ತಿ ನೀಡಲಾಗಿತ್ತು. ಆದರೆ ಲಂಚಕ್ಕೆ ಸಂಸದೀಯ ವಿಶೇಷ ಸವಲತ್ತಿನಿಂದ ರಕ್ಷಣೆ ನೀಡಲಾಗುವುದಿಲ್ಲ.1998ರ ತೀರ್ಪಿನ ವಾಖ್ಯಾನವು ಸಂವಿಧಾನದ 105 ಮತ್ತು 194ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ವಿವರಿಸಿದೆ.

Advertisement

ಈ ಎರಡು ವಿಧಿಗಳ ಅನ್ವಯ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಕಾನೂನು ಕ್ರಮದಿಂದ ವಿನಾಯ್ತಿ ನೀಡುವುದಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಪೀಠ ತಿಳಿಸಿದೆ. ಅಲ್ಲದೇ ಪಿವಿ ನರಸಿಂಹ ರಾವ್ ಪ್ರಕರಣವನ್ನು ನಾವು ಒಪ್ಪುವುದಿಲ್ಲ. ಪಿವಿ ನರಸಿಂಹ ರಾವ್ ಪ್ರಕರಣದ ತೀರ್ಪಿನಲ್ಲಿ ಮತ ಚಲಾಯಿಸಲು ಲಂಚ ಪಡೆದ ಶಾಸಕರಿಗೆ ಶಿಕ್ಷೆಯಿಂದ ವಿನಾಯ್ತಿ ನೀಡಬೇಕೆಂಬ ತೀರ್ಪು ಜಟಿಲವಾಗಿದ್ದು, ಅದನ್ನು ರದ್ದುಪಡಿಸುವುದಾಗಿ ಸಿಜೆಐ ಹೇಳಿದರು.

Author Image

Advertisement