ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಕ್ಕಳ ಮೇಲೆ ಅತ್ಯಾಚಾರವೆಸಗಲು ಸಹಕಾರ ನೀಡಿದ ತಾಯಿಗೆ 40 ವರ್ಷ ಜೈಲು

12:03 PM Nov 28, 2023 IST | Bcsuddi
Advertisement

ಕೇರಳ: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರವೆಸಗಲು ಪ್ರಿಯಕರನಿಗೆ ಸಹಕಾರಿಸಿದ ಆರೋಪದ ಮೇಲೆ ನ್ಯಾಯಾಲಯ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

Advertisement

ಆರೋಪಿ ಮಹಿಳೆ ಮಾನಸಿಕ ಅಸ್ವಸ್ಥವಾಗಿರುವ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಬಳಿಕ ಈಕೆ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ತನ್ನ ಪ್ರಿಯಕರ ಶಿಶುಪಾಲನ್ ಜೊತೆ ವಾಸಿಸುತ್ತಿದ್ದಳು. ಅಲ್ಲದೇ ಆಕೆಯೊಂದಿಗೆ ತನ್ನ 7 ವರ್ಷ ಹಾಗೂ 11ವರ್ಷದ ಇಬ್ಬರು ಹೆಣ್ಣು ಮಕ್ಕಳು ಕೂಡ ಜೊತೆಗೆ ವಾಸವಾಗಿದ್ದರು .

ಈ ಸಂದರ್ಭದಲ್ಲಿ ಅರೋಪಿ ಶಿಶುಪಾಲ್ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದಕ್ಕೆ ಬಾಲಕಿಯರ ತಾಯಿಯೇ ಸಹಕಾರ ನೀಡುತ್ತಿದ್ದಳು ಎನ್ನಲಾಗಿದೆ. ಈ ಘಟನೆ ಮಾರ್ಚ್ 2018 ರಿಂದ ಸೆಪ್ಟೆಂಬರ್ 2019 ರ ನಡುವೆ ನಡೆದಿದೆ ಎನ್ನಲಾಗಿದೆ.

ಅತ್ಯಾಚಾರ ವೆಸಗಿದ ವಿಚಾರವನ್ನು ಯಾರಿಗೂ ಹೇಳದಂತೆ ಮಕ್ಕಳಿಬ್ಬರಿಗೂ ಬೆದರಿಕೆ ಹಾಕಿದ್ದಾರೆ. ಆದರೆ ಇಬ್ಬರೂ ಬಾಲಕಿಯರು ಹೇಗೋ ಮನೆಯಿಂದ ತಪ್ಪಿಸಿಕೊಂಡು ಅಜ್ಜಿಯ ಮನೆಗೆ ಬಂದಿದ್ದಾರೆ. ಇಲ್ಲಿ ಮಕ್ಕಳು ಆದ ಹಿಂಸೆಯನ್ನು ಅಜ್ಜಿಯ ಬಳಿ ಹೇಳಿಕೊಂಡಿದ್ದಾರೆ.

ತಕ್ಷಣ ಎಚ್ಚೆತ್ತ ಅಜ್ಜಿ ಮಕ್ಕಳನ್ನು ಕರೆದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದ ವಿಚಾರ ಗೊತ್ತಾಗುತ್ತಿದ್ದಂತೆ ಶಿಶುಪಾಲನ್ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದಾಗ ಶಿಶುಪಾಲನ್ ನನ್ನು ಪ್ರೀತಿಸುತ್ತಿದ್ದು ತನ್ನ ಮಕ್ಕಳ ಮೇಲೆ ಅತ್ಯಾಚಾರವೆಸಗಲು ತಾನು ಸಹಾಯ ಮಾಡುತ್ತಿದ್ದೆ ಎಂದು ತಪ್ಪು ಒಪ್ಪಿಕೊಂಡಿದ್ದಾಳೆ.

ಈ ವಿಚಾರವಾಗಿ ಕೋರ್ಟ್ ಹೆತ್ತ ಮಕ್ಕಳ ಮೇಲೆ ದೌರ್ಜನ್ಯ ಎಸಗಲು ಕುಮ್ಮಕ್ಕು ನೀಡಿದ ತಾಯಿ ಕ್ಷಮೆಗೆ ಅನರ್ಹಳು ಎಂದು ಹೇಳಿ 40 ವರ್ಷಗಳ ಜೈಲು 20 ಸಾವಿರ ರೂ. ದಂಡವನ್ನು ಕಟ್ಟುವಂತೆ ಆದೇಶ ಹೊರಡಿಸಿದೆ .
ಅಲ್ಲದೇ ಒಂದು ವೇಳೆ ದಂಡ ಕಟ್ಟಲು ಸಾಧ್ಯವಾಗದಿದ್ದಲ್ಲಿ ಮತ್ತೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸುವ ಆದೇಶವನ್ನು ಹೊರಡಿಸಿದೆ.

Advertisement
Next Article