ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಂಜುನಾಥ್‌ 70 ಸಾವಿರ ಮತಗಳ ಮುನ್ನಡೆ, ಮಂಡ್ಯದಲ್ಲಿ ಎಚ್‌ಡಿಕೆ ಮುನ್ನಡೆ ,ಬಳ್ಳಾರಿ - ಕಲಬುರಗಿ ಕಾಂಗ್ರೆಸ್‌

10:45 AM Jun 04, 2024 IST | Bcsuddi
Advertisement

ಬೆಂಗಳೂರು:ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಶಿವಮೊಗ್ಗದಲ್ಲಿ ೧೨, ೪೮೫ ಮತಗಳ ಮುನ್ನಡೆ ಕಾಯ್ದಕೊಂಡಿದ್ದಾರೆ.

Advertisement

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ್‌ ಪೂಜಾರಿ 26 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌ ಮಂಜುನಾಥ್‌ 70ಸಾವಿರ ಮತಗಿಂದ ಮುನ್ನಡೆ ಗಳಿಸಿದ್ದಾರೆ.

ಕಾಂಗ್ರೇಸ್‌ ಅಭ್ಯರ್ಥಿ ಡಿ.ಕೆ ಸುರೇಶ್‌ಗೆ ಬಾರೀ ಹಿನ್ನಡೆ ಗಳಿಸಿದ್ದಾರೆ. ಕಲಬುರಗಿಯಲ್ಲಿ ಕಾಂಗ್ರಸ್‌ ಅಭ್ಯರ್ಥಿ ರಾಧಾಕೃಷ್ಣ ಡೊಡ್ಮನಿ 2 ಸಾವಿರ ಮತಗಳಿಂದ ಮುನ್ನಡೆಗಳಿಸಿದ್ದಾರೆ. ತುಮಕೂರಿನಲ್ಲಿ ವಿ.ಸೋಮಣ್ಣ 4 ಸಾವಿರ ಮತಗಳ ಮುನ್ನಡೆ, ಬೆಳಗಾವಿಯಲ್ಲಿ ಜಗದೀಶ್‌ ಶೆಟ್ಟರ್‌ 28 ಸಾವಿರ ಮತಗಳ ಮುನ್ನಡೆ. ಮಂಡ್ಯದಲ್ಲಿ 38 ಸಾವಿರ ಮತಗಳಿಂದ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್‌ - ಮುನ್ಸೈರ್‌ ಅಲಿ ಖಾನ್‌ ನಡುವೆ ಬಿಗ್‌ ಫೈಟ್‌ ಇದೆ. ಮೋಹನ್‌ ಕೇವಲ ೪೫೨ಮತಗಳಿಂದ ಮುನ್ನಡೆ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ೨೭ ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ ಉತ್ತರ ಕನ್ನಡ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ೪೫ ಸಾವಿರ ಮತಗಳಿಂದ ಮುನ್ನಡೆ.

ಸದ್ಯದಕ್ಕೆ ದೇಶದಲ್ಲಿ ೫೪೩ ಕ್ಷೇತ್ರಗಳ ಪೈಕಿ ಎನ್‌ಡಿಎ ಕೂಟ 301 ಇಂಡಿಯಾ ಒಕ್ಕೂಟ 210, ಇತರೆ 30 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಚ್ಚರಿ ಎನ್ನುವಂತೆ  ಇಂಡಿಯಾ ಒಕ್ಕೂಟ ಪೈಪೋಟಿ ನೀಡುತ್ತಿದೆ

 

Advertisement
Next Article