ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಂಗಳೂರು : MSEZ ಫಿಶ್ ಮಿಲ್ ನಲ್ಲಿ ಭಾರಿ ಅಗ್ನಿ ಅವಘಡ, ಕೋಟ್ಯಾಂತರ ರೂಪಾಯಿಗಳ ನಷ್ಟ

05:53 PM Jul 14, 2024 IST | Bcsuddi
Advertisement

ಸುರತ್ಕಲ್: ಇಲ್ಲಿನ ಕೈಗಾರಿಕಾ ವಲಯ(ಎಂಎಸ್‌ಇಝಡ್)ದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಥೆಂಟಿಕ್ ಓಷನ್ ಟ್ರಶರ್‌ನಲ್ಲಿ ರವಿವಾರ ಮಧ್ಯಾಹ್ನ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಕಂಪೆನಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನೌಕರರು ಯಾರು ಇರಲಿಲ್ಲ. ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಥೆಂಟಿಕ್ ಓಷನ್ ಟ್ರೆಶರ್ ಕಂಪೆನಿ ಮೀನನ್ನು ಸ್ವಚ್ಚಗೊಳಿಸಿ ಮಾಂಸದ ರೂಪಕ್ಕೆ ಪರಿವರ್ತಿಸಿ 10 ಕೆ.ಜಿ. ಯ ಪ್ಯಾಕೆಟ್‌ಗಳನ್ನಾಗಿ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಕಂಪೆನಿ. ಈ ಸಂಸ್ಥೆಯ ಕೋಲ್ಡ್ ಸ್ಟೋರ್ ಸೆಕ್ಷನ್ ಹಾಗೂ ಕಟ್ಟಿಂಗ್ ಸೆಕ್ಷನ್‌ಗಳಲ್ಲಿ ದುರಸ್ತಿ ಕಾರ್ಯನಡೆಯುತ್ತಿತ್ತು. ಈ ವೇಳೆ ಕೋಲ್ಡ್ ಸ್ಟೋರೆಜ್ ಸೆಕ್ಷನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆಗೆ ಆಕಾಶದೆತ್ತರಕ್ಕೆ ಹೊಗೆ ಉಗುಳುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಆದರೆ ಅಗ್ನಿ ಅವಘಡದಿಂದ ಸುಮಾರು 10 ಕೋಟಿ ರೂ. ಮೌಲ್ಯದ ಮೀನಿನ ಉತ್ಪನ್ನಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಕೈಗಾರಿಕಾವಲಯ ಎಂಆರ್ ಪಿಎಲ್, ಗೇಲ್ ಇಂಡಿಯಾ ಕಂಪೆನಿಗಳ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ.

Advertisement

Advertisement
Next Article