ಮಂಗಳೂರು ವಿಮಾನ ನಿಲ್ದಾಣವಿನ್ನು ನಿಶ್ಶಬ್ದ ವಲಯ!
ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇನ್ನು ಮುಂದೆ ನಿಶ್ಶಬ್ದ ವಲಯವಾಗಿರಲಿದೆ. ಹೌದು, ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ಏರ್‌ಲೈನರ್‌ಗಳಿಂದ ಯಾವುದೇ ಪ್ರಯಾಣಿಕರ ಮಾಹಿತಿ ಕುರಿತ ಅನೌನ್ಸ್ ಮೆಂಟ್ ಇರುವುದಿಲ್ಲ. ಪ್ರಯಾಣಿಕರು ಫ್ಲೈಟ್ ಇನ್ಫಾರ್ಮೇಶನ್ ಡಿಸ್‌ಪ್ಲೇ ಸಿಸ್ಟಂ ಫಲಕಗಳನ್ನು ನೋಡಿ ಮಾಹಿತಿ ಪಡೆದುಕೊಳ್ಳ ಬೇಕಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.ವಿಮಾನ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇನ್ನು ಮುಂದೆ ವಿಮಾನಗಳ ಹಾರಾಟದ ಮಾಹಿತಿಗಳು ಫ್ಲೈಟ್ ಇನ್ಫಾರ್ಮೇಶನ್ ಡಿಸ್‌ಪ್ಲೇ ಸಿಸ್ಟಂ ಫಲಕಗಳಲ್ಲಿ ಅನಾವರಣಗೊಳ್ಳಲಿದೆ. ವಿಮಾನ ನಿಲ್ದಾಣದ ಹಲವು ಕಡೆಗಳಲ್ಲಿ ಈ ಡಿಸ್‌ಪ್ಲೇಗಳನ್ನು ಇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ‘ಮೇ ಐ ಹೆಲ್ಪ್ ಯು’ ಡೆಸ್ಕ್ ನಿರ್ವಹಿಸುವ ಸಿಬಂದಿ, ಗ್ರಾಹಕ ಸೇವೆ ಮತ್ತು ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕರು, ಪ್ರಣಾಮ್ ಸಿಬಂದಿ ಕೂಡಾ ಮಾಹಿತಿಯೊಂದಿಗೆ ಪ್ರಯಾಣಿಕರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ.
ಎಸ್.ಎಂ.ಎಸ್ ಮೂಲಕ ಮಾಹಿತಿ :
ಎಲ್ಲಾ ಏರ್‌ಲೈನ್ ಚೆಕ್-ಇನ್ ಕೌಂಟರ್‌ಗಳು, ಬೋರ್ಡಿಂಗ್ ಗೇಟ್‌ಗಳಲ್ಲಿ ವಿಮಾನದ ಮಾಹಿತಿಯನ್ನು ವೀಕ್ಷಿಸ ಬಹುದು. ಬೋರ್ಡಿಂಗ್ ಗೇಟ್ ಬದಲಾವಣೆಗಳು/ ವಿಮಾನ ಮರು ವೇಳಾಪಟ್ಟಿ ವಿವರಗಳನ್ನು ಎಸ್.ಎಂ.ಎಸ್. ಮೂಲಕ ಪ್ರಯಾಣಿಕರ ನೋಂದಾಯಿತ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯಲ್ಲೂ ಕೂಡಾ ಏರ್‌ಲೈನ್ ಹಂಚಿಕೊಳ್ಳಲಿದೆ ಎಂದು ವಿವರಿಸಿದ್ದಾರೆ.