For the best experience, open
https://m.bcsuddi.com
on your mobile browser.
Advertisement

ಮಂಗಳೂರು: ಮಾಜಿ ಶಾಸಕ ಸಹೋದರ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್..!

05:48 PM Oct 06, 2024 IST | BC Suddi
ಮಂಗಳೂರು  ಮಾಜಿ ಶಾಸಕ ಸಹೋದರ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್
Advertisement

ಮಂಗಳೂರು : ಮಾಜಿ ಶಾಸಕ ಮೊಯ್ದೀನ್ ಬಾವಾ ಸಹೋದರ ಬಿ.ಎಂ.ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್ ದೊರಕಿದ್ದು, ಮಹಿಳೆಯೊಬ್ಬರ ಕಿರುಕುಳವೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಮಹಿಳೆಯು ಮುಮ್ತಾಜ್ ಅಲಿಯವರಿಗೆ ಮದುವೆಯಾಗುವಂತೆ ನಿರಂತರ ಬೆದರಿಕೆ ಒಡ್ಡುತ್ತಿದ್ದಳು. ಮುಮ್ತಾಜ್ ಅಲಿಯವರ ವೀಡಿಯೋ ಇಟ್ಟುಕೊಂಡು ಆಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು. ಆಕೆಗೆ ಸುರತ್ಕಲ್‌ನ ನಾಲ್ವರು ಸಹಕಾರ ನೀಡುತ್ತಿದ್ದರು ಎನ್ನಲಾಗುತ್ತಿದೆ. ಮಸೀದಿಯ ಕಮಿಟಿ ವಿಚಾರದಲ್ಲಿ ಆ ನಾಲ್ವರಿಗೂ ಮುಮ್ತಾಜ್ ಅಲಿಗೂ ಜಟಾಪಟಿ ಇತ್ತು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಆ ನಾಲ್ವರು ಮಹಿಳೆಗೆ ಹಿಂದಿನಿಂದ ಬೆಂಬಲ ಸೂಚಿಸುತ್ತಿದ್ದರು. ಇದೇ ಕಾರಣಕ್ಕೆ ಅವರು ಮರ್ಯಾದೆಗೆ ಹೆದರಿ ನಾಪತ್ತೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

Author Image

Advertisement