For the best experience, open
https://m.bcsuddi.com
on your mobile browser.
Advertisement

ಮಂಗಳೂರು: ಫುಟ್ಬಾಲ್ ಆಟದಲ್ಲಿ ಕಿರಿಕ್​, ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್‌ ಮಾಡಿ ಅರೆಬೆತ್ತಲೆಗೊಳಿಸಿ ಹಲ್ಲೆ..!

11:56 AM Aug 20, 2024 IST | BC Suddi
ಮಂಗಳೂರು  ಫುಟ್ಬಾಲ್ ಆಟದಲ್ಲಿ ಕಿರಿಕ್​  ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್‌ ಮಾಡಿ ಅರೆಬೆತ್ತಲೆಗೊಳಿಸಿ ಹಲ್ಲೆ
Advertisement

ಮಂಗಳೂರು: ಫುಟ್ಬಾಲ್ ಆಟದಲ್ಲಿ ಕಿರಿಕ್​ ಮಾಡಿಕೊಂಡು ವಿದ್ಯಾರ್ಥಿಗಳನ್ನು ಅಪಹರಿಸಿ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಮಹಾಕಾಳಿ ಪಡ್ಪು ಮತ್ತು ಪಡೀಲ್ ನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಮಂಗಳೂರಿನ ಪ್ರತಿಷ್ಟಿತ ಅಲೋಶಿಯಸ್ ಹಾಗೂ ಯೆನಪೋಯ ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು ಮಹಮ್ಮದ್ ಶುರೈ, ಮಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್ ಮತ್ತು ಮಹಮ್ಮದ್ ಜನ್ಮದ್ ಎಂಬ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ದಿಯಾನ್, ಅನ್ನೈ, ತಸ್ಮಿನ್, ಸಲ್ಮಾನ್, ಅನಾಸ್ ಹಲ್ಲೆಗೈದ ಆರೋಪಿಗಳು. ನಗರದ ಎರಡು ಪ್ರತ್ಯೇಕ ಸ್ಥಳಗಳಿಗೆ ಕರೆದೊಯ್ದು ವಿದ್ಯಾರ್ಥಿಗಳಿಗೆ ಅರೆಬೆತ್ತಲೆಗೊಳಿಸಿ ಮನಸೋ ಇಚ್ಚೆ ಹೊಡೆದು ಸಿಗರೇಟ್ ನಿಂದ ಸುಟ್ಟು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಾಲಾಗುತ್ತಿದೆ.

ಈ ಪೈಕಿ ಹಲ್ಲೆ ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ನಾಲ್ವರಿಗೆ ಶೋಧ ನಡೆಸಿದ್ದಾರೆ. ತನಿಖೆ ವೇಳೆ ಬಟ್ಟೆ ಬಿಚ್ಚಿಸಿ ಕ್ಷಮೆ ಕೇಳಿ ಬಸ್ಕಿ ಹೊಡೆಸಿದ್ದ ನೀಜ ಕೃತ್ಯದ ವಿಡಿಯೋ ಪೊಲೀಸರು ಕೈಸೇರಿದೆ

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Author Image

Advertisement