For the best experience, open
https://m.bcsuddi.com
on your mobile browser.
Advertisement

 ಮಂಗಳವಾರ ಸುರಿದ ಹೊಸದುರ್ಗದಲ್ಲಿ 26.4 ಮಿ.ಮೀ ಮಳೆ

07:43 PM Nov 08, 2023 IST | Bcsuddi
 ಮಂಗಳವಾರ ಸುರಿದ ಹೊಸದುರ್ಗದಲ್ಲಿ 26 4 ಮಿ ಮೀ ಮಳೆ
Advertisement

ಚಿತ್ರದುರ್ಗ: ಮಂಗಳವಾರ ಸುರಿದ ಮಳೆ ವಿವರದನ್ವಯ ಜಿಲ್ಲೆಯ ಹೊಸದುರ್ಗದಲ್ಲಿ  26.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ 4.3 ಮಿ.ಮೀ, ಮತ್ತೋಡು 6.3 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 2.4 ಮಿ.ಮೀ, ರಾಮಗಿರಿ 24.4 ಮಿ.ಮೀ ಮಳೆಯಾಗಿದೆ.

Advertisement

24 ಮನೆಗಳು ಭಾಗಶಃ ಹಾನಿ: ಮಂಗಳವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ  ಒಟ್ಟು 24 ಮನೆಗಳು ಭಾಗಶಃ ಹಾನಿಯಾಗಿದ್ದು, 1 ಸಣ್ಣ ಜಾನುವಾರು  ಹಾನಿಯಾಗಿದೆ.

ಹೊಸದುರ್ಗ ತಾಲ್ಲೂಕಿನಲ್ಲಿ 17 ಮನೆಗಳು ಭಾಗಶಃ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 5 ಮನೆಗಳು ಭಾಗಶಃ ಹಾನಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Author Image

Advertisement