For the best experience, open
https://m.bcsuddi.com
on your mobile browser.
Advertisement

ಮಂಗನ ಕಾಯಿಲೆಗೆ 18 ವರ್ಷದ ಯುವತಿ ಬಲಿ

02:32 PM Jan 08, 2024 IST | Bcsuddi
ಮಂಗನ ಕಾಯಿಲೆಗೆ 18 ವರ್ಷದ ಯುವತಿ ಬಲಿ
Advertisement

ಶಿವಮೊಗ್ಗ: ಮಂಗನ ಕಾಯಿಲೆಯಿಂದ (ಕ್ಯಾಸನೂರು ಫಾರೆಸ್ಟ್ ಡಿಸೀಸ್ -ಕೆಎಫ್ ಡಿ) ಬಳಲುತ್ತಿದ್ದ 18 ವರ್ಷದ ಯುವತಿ ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹೊಸನಗರ ತಾಲ್ಲೂಕಿನ ಅರಮನೆ ಕೊಪ್ಪ ವ್ಯಾಪ್ತಿಯ ಗ್ರಾಮವೊಂದರ ಯುವತಿಗೆ ವಾರದ ಹಿಂದೆ ಜ್ವರ ಕಾಣಿಸಿಕೊಂಡಿತ್ತು.ಬಳಿಕ ಜ್ವರ ಉಲ್ಬಣಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇಲ್ಲಿ ಕೆಎಫ್ಡಿ ಪರೀಕ್ಷೆ ನಡೆಸಿದಾಗ ಮೊದಲ ಬಾರಿ ನೆಗೆಟಿವ್, ಎರಡನೇ ಬಾರಿ ಪಾಸಿಟಿವ್ ಬಂದಿತ್ತು .

ಮೆಗ್ಗಾನ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಯುವತಿಯನ್ನು ಶುಕ್ರವಾರ ಸಂಜೆ ಮಣಿಪಾಲದ ಆಸ್ಪ ತ್ರೆ ಗೆ ದಾಖಲಿಸಲಾಗಿತ್ತು . ಆದರೆ ಬಹು ಅಂಗಾಂಗ ವೈಫಲ್ಯ ದಿಂದ ಸೋಮವಾರ ಬೆಳಿಗ್ಗೆ ಯುವತಿ ಮೃತಪಟ್ಟಿದ್ದಾರೆ.

Advertisement

ಕೆಎಫ್ಡಿ ಪಾಸಿಟಿವ್ ಆಗಿದ್ದ ಯುವತಿ ರಕ್ತಹೀನತೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಗೆ ಸ್ಪಂದಿಸಲಿಲ್ಲ ಎಂದು ಶಿವಮೊಗ್ಗ ಡಿಎಚ್ ಒ ಡಾ.ರಾಜೇಶ ಸುರಗಿಹಳ್ಳಿ ಪ್ರಕ್ರಿಯಿಸಿದ್ದಾರೆ

Author Image

Advertisement