ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಭೋವಿ ಗುರುಪೀಠಕ್ಕೆ ಗೀತಾ ಶಿವರಾಜಕುಮಾರ ಭೇಟಿ.!

07:40 AM Apr 29, 2024 IST | Bcsuddi
Advertisement

 

Advertisement

ಚಿತ್ರದುರ್ಗ: ಇಲ್ಲಿನ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ ಅವರು ಭೇಟಿ ನೀಡಿ, ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರ ಆಶೀರ್ವಾದ ಪಡೆದರು. ನಟ ಶಿವರಾಜಕುಮಾರ ಜತೆ ಇದ್ದರು.

ಬಳಿಕ ನಿಟ್ಟೂರಿನ ನಾರಾಯಣ ಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ,

ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ,  ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ  ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಕೇತೇಶ್ವರ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ , ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಠದ ಮಹಾಲಿಂಗ ಸ್ವಾಮೀಜಿ, ಇರಕಲ್ ಮಠದ ಬಸವ ಪ್ರಸಾದ್ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಕಳೆದ ವರ್ಷ ವಿಧಾನ ಸಭೆ ಚುನವಣಾ ಪೂರ್ವಾ ಶ್ರೀಗಳಿಗೆ ನೀಡಿದ ಸಚಿವ ಮಧುಬಂಗಾರಪ್ಪ ಅವರ ವಾಗ್ದನದಂತೆ ಶಿವಮೊಗ್ಗದ ರವಿಕುಮಾರ ಅವರನ್ನು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದು ನೆನದರು.

ಶಿವರಾಜ ಕುಮಾರ ಅವರು ಶ್ರೀಗಳೊಂದಿಗೆ ಉಪಹಾರ ಸೇವಿಸುತ್ತ ಮಾತನಾಡಿ ಶಕ್ತಿಧಾಮ ಸೇವೆ ಜನಸೇವೆಗೆ ಪ್ರೇರಣೆ ಹೆಚ್ಚಿಸಿದೆ. ಜನಸೇವೆ ಜನಾರ್ಧನ ಸೇವೆ. ನಮ್ಮ ಕಡೆ ಉಸಿರು ಇರುವ ತನಕ ಅಬಲೆಯರಿಗೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಿ ಪುನೀತ್ ಅವರ ಕನಸ್ಸನ್ನು ಈಡೇರಿಸುತ್ತೇವೆ ಎಂದು ನೆನೆದು ಭಾವುಕರಾದರು.

ಚುನಾವಣಾ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್,ಭೋವಿ ಅಭಿವೃದ್ದಿ ನಿಗಮದ ರಾಜ್ಯ ಘಟಕ ಅಧ್ಯಕ್ಷ ಎಸ್.ರವಿಕುಮಾರ್, ಚಿತ್ರದುರ್ಗ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಎನ್.ಡಿ.ಕುಮಾರ್, ಸಂದೀಪ,ದೇವಿಕುಮಾರ್,

ಪ್ರಮುಖರಾದ ಬಿ.ಜಗದೀಶ್, ಧೀರರಾಜ್ ಹೊನ್ನವಿಲೆ, ದೇಶಾದ್ರಿ ಹೊಸ್ಮನೆ, ಕೆ.ಹರ್ಷ ಭೋವಿ,  ತಿಮ್ಮರಾಜು, ಕೃಷ್ಣಪ್ಪ,  ಸೊರಬ ಸುರೇಶ್ ಹಾವಣ್ಣನವರ್, ಸಾಗರ ಎಲ್. ಚಂದ್ರಪ್ಪ, ಶಿಕಾರಿಪುರದ ಸುನೀಲ್, ಭದ್ರಾವತಿಯ ಶಿವು ಪಾಟೀಲ್, ವಕೀಲ ಪ್ರಕಾಶ್ ಸೇರಿ ಭೋವಿ ಸಮಾಜದ ಪ್ರಮುಖರು ಇದ್ದರು‌.

Tags :
ಭೋವಿ ಗುರುಪೀಠಕ್ಕೆ ಗೀತಾ ಶಿವರಾಜಕುಮಾರ ಭೇಟಿ.!
Advertisement
Next Article