For the best experience, open
https://m.bcsuddi.com
on your mobile browser.
Advertisement

ಭಾರಿ ಬೆಲೆಗೆ ಮಾರಾಟವಾದ ನಿಂಬೆಹಣ್ಣು - ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು..!

02:20 PM Feb 15, 2024 IST | Bcsuddi
ಭಾರಿ ಬೆಲೆಗೆ ಮಾರಾಟವಾದ ನಿಂಬೆಹಣ್ಣು   ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು
Advertisement

ಒಂದು ನಿಂಬೆಹಣ್ಣು ಅಬ್ಬಬ್ಬಾ ಅಂದ್ರೆ 5 ಅಥವಾ 6 ರೂಪಾಯಿಗೆ ಸಿಗುತ್ತದೆ. ಅದರಲ್ಲೂ ಬೇಸಿಗೆ ಬಂದರೆ ಕೊಂಚ ಬೆಲೆ ಹೆಚ್ಚಾಗುತ್ತದೆ. ಆದರೆ, ಇಲ್ಲೊಂದು ನಿಂಬೆಹಣ್ಣು ಭಾರಿ ಬೆಲೆಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ.

ಹೌದು, ಈ ನಿಂಬೆಹಣ್ಣು ಬರೋಬ್ಬರಿ 1.5 ಲಕ್ಷಕ್ಕೆ ಹರಾಜಾಗಿದ್ದು, ಈ ಸುದ್ದಿ ಕೇಳಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಇಂಗ್ಲೆಂಡಿನ ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ 19ನೇ ಶತಮಾನದ ಬೀರುವೊಂದರಲ್ಲಿ 285 ವರ್ಷ ಹಳೆಯ ನಿಂಬೆಹಣ್ಣು ಸಿಕ್ಕಿದೆ.

ಈ ಹಣ್ಣು ಇದೀಗ ಸುಮಾರು ರೂ.1.5 ಲಕ್ಷಕ್ಕೆ ಹರಾಜಾಗಿ ದಾಖಲೆ ಬರೆದಿದೆ. ಆದ್ರೆ, ಈ ನಿಂಬೆಹಣ್ಣು ತಿನ್ನಲು ಯೋಗ್ಯವಾಗಿಲ್ಲ. ಬ್ರಿಟಿಷ್ ಮಾಧ್ಯಮ ವರದಿಗಳ ಪ್ರಕಾರ, ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುವಾಗ 19ನೇ ಶತಮಾನದ ನಿಂಬೆಹಣ್ಣು ಸಿಕ್ಕಿದೆ. ಇದು 2 ಇಂಚಿನ ಕಂದುಬಣ್ಣದ ವಿಲ್ಟೆಡ್ ತಳಿಯ ನಿಂಬೆ. ಸುಮಾರು 19ನೇ ಶತಮಾನದ್ದು ಅಂತ ತಿಳಿದಿದ್ದ ಕುಟುಂಬಕ್ಕೆ, ಅದು 285 ವರ್ಷ ಹಳೆಯದು ಎಂದು ತಿಳಿದು ಶಾಕ್‌ ಆಗಿದೆ.

Advertisement

ಈ ಕುರಿತ ಸುದ್ದಿಯನ್ನು 'ದಿ ಸನ್' ಪ್ರಕಟಿಸಿದೆ. ಇದಲ್ಲದೆ, ನಿಂಬೆ ಮೇಲೆ ನವೆಂಬರ್ 4, 1739 ರಂದು ಮಿಸ್ ಇ ಬಾಕ್ಸ್ಟರ್ ಅದನ್ನು ಉಡುಗೊರೆಯಾಗಿ ನೀಡಿದ್ದಾಗಿ ಬರೆಯಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ನಿಂಬೆಯನ್ನು ಭಾರತದಿಂದ ಇಂಗ್ಲೆಂಡ್‌ಗೆ ತರಲಾಯಿತು ಎಂದು ನಂಬಲಾಗಿದೆ.

Author Image

Advertisement