For the best experience, open
https://m.bcsuddi.com
on your mobile browser.
Advertisement

'ಭಾರತವನ್ನು ವಿಶ್ವದ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡುತ್ತೇವೆ '- ಮೋದಿ ಭರವಸೆ

01:57 PM Jul 03, 2024 IST | Bcsuddi
 ಭಾರತವನ್ನು ವಿಶ್ವದ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡುತ್ತೇವೆ    ಮೋದಿ ಭರವಸೆ
Advertisement

ನವದೆಹಲಿ: ಇಂದು ಕೂಡ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರ ನೀಡುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ 70 ಸಂಸದರು ವಿಚಾರ ಮಂಡಿಸಿದ್ದಾರೆ. ಚರ್ಚೆಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಬಹು ದಶಕಗಳ ಬಳಿಕ ಒಂದೇ‌ ಸರ್ಕಾರಕ್ಕೆ ಮೂರನೇ ಬಾರಿಗೆ ಅವಕಾಶ ನೀಡಲಾಗಿದೆ. 10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬರುವುದು ಸಾಮಾನ್ಯ ವಿಚಾರವಲ್ಲ ಎಂದು ಹೇಳಿದರು.

ಅಂಬೇಡ್ಕರ್ ಸಂವಿಧಾನದ ಪರಿಣಾಮ ನಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಮತ್ತೆ ಗೆದ್ದು ಬರಲು ಸಾಧ್ಯವಾಗಿದೆ. ಸಂವಿಧಾನ ಕೇವಲ ಪುಸ್ತಕವಲ್ಲ, ಸ್ಫೂರ್ತಿಯ ಸಂಕೇತವಾಗಿದೆ. ಸಂವಿಧಾನ ನಮಗೆ ಮಾರ್ಗದರ್ಶನ ನೀಡುತ್ತದೆ. ಕೆಲವರು ಸಂವಿಧಾನ ಪುಸ್ತಕ ಹಿಡಿದು ಮಾತ್ರ ತಿರುಗುತ್ತಾರೆ ಎಂದು ವಿಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

Advertisement

ಸಂವಿಧಾನ ದಿವಸ ಆಚರಣೆಯನ್ನು ನಾವು ತಂದಿದ್ದೇವೆ. ಶಾಲಾ-ಕಾಲೇಜುಗಳಿಗೆ ಸಂವಿಧಾನದ ಮಹತ್ವ ತಿಳಿಸಲಾಗುತ್ತಿದೆ. ಸಂವಿಧಾನ ನಮಗೆ ನಂಬಿಕೆಯ ಭಾಗ ಮತ್ತು ಪ್ರೇರಣೆಯಾಗಿದೆ. 75 ನೇ ವರ್ಷಾಚರಣೆಯನ್ನು ನಾವು ಉತ್ಸವವಾಗಿ ಆಚರಣೆ ಮಾಡಿದ್ದೇವೆ. ಮೂರನೇ ಬಾರಿ ನಮಗೆ ಅವಕಾಶ ನೀಡಿ ದೇಶದ ಜನ ಆಶೀರ್ವಾದ ಮಾಡಿದ್ದಾರೆ ಎಂದರು.

ಈ ವೇಳೆ ಕಾಂಗ್ರೆಸ್‌ ಮಲ್ಲಿಕಾರ್ಜುನ ಖರ್ಗೆಯವರು ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿ ಘೋಷಣೆಗಳನ್ನು ಕೂಗಿದರು. ಮಾತು ಮುಂದುವರಿಸಿದ ಮೋದಿ, ನಮ್ಮ ಆರ್ಥಿಕತೆಯನ್ನು 10 ರಿಂದ ಐದನೇ ಸ್ಥಾನಕ್ಕೆ ತಂದಿದ್ದೇವೆ. ಮೂರನೇ ಆರ್ಥಿಕ ಶಕ್ತಿಯಾಗಿ ರೂಪಿಸಲು ನಮಗೆ ಜನರು ಮತ್ತೆ ಗೆಲ್ಲಿಸಿದ್ದಾರೆ. ಮುಂದೆ ವಿಶ್ವದ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು

Author Image

Advertisement