ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಭಾರತದ ಸಾಮಾಜಿಕ ಜಾಲತಾಣ ಸ್ಟಾರ್ಟ್ ಅಪ್ ಕೂ ಸ್ಥಗಿತ

04:09 PM Jul 03, 2024 IST | Bcsuddi
Advertisement

ಬೆಂಗಳೂರು: ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಂಡಿದ್ದ ಭಾರತೀಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಕೂ ಅನ್ನು ಮುಚ್ಚಲಾಗುತ್ತಿದೆ ಎಂದು ಅದರ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಲಿಂಕ್ಡ್‌ಇನ್‌ನಲ್ಲಿ ಬುಧವಾರ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Advertisement

ಡೈಲಿಹಂಟ್ ಸೇರಿದಂತೆ ಅನೇಕ ಕಂಪನಿಗಳೊಂದಿಗೆ ಸಂಭಾವ್ಯ ಮಾರಾಟ ಅಥವಾ ವಿಲೀನಕ್ಕಾಗಿ ಹಲವಾರು ಸುತ್ತಿನ ಮಾತುಕತೆಗಳು ವಿಫಲವಾದ ನಂತರ ಈ ನಿರ್ಧಾರ ಹೊರಬಿದ್ದಿದೆ.

"ಕೂ ಅನ್ನು ಮಾರುವ ಅವರ ಸತತ ಪ್ರಯತ್ನಗಳು ಫಲಕೊಡದೇ ಹೋದ್ದರಿಂದ ಅಂತಿಮವಾಗಿ ವಿದಾಯ ಹೇಳಲಾಗಿದೆ. ಸೋಷಿಯಲ್ ಮೀಡಿಯಾ ತಾಣವನ್ನು ನಿರ್ವಹಿಸಲು ಬಹಳವೇ ವೆಚ್ಚವಾಗುತ್ತದೆ. ಹೆಚ್ಚು ದಿನ ಇದನ್ನು ಮುಂದುವರಿಸಲು ಆಗುವುದಿಲ್ಲ ಎಂದು Koo ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಬಿಡವಟ್ಕಾ ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬುಧವಾರ ಬರೆದಿದ್ದಾರೆ.

ಇದರೊಂದಿಗೆ ಭಾರತದ ಏಕೈಕ ಸೋಷಿಯಲ್ ಮೀಡಿಯಾ ಆ್ಯಪ್ ಎಂಬ ಹೆಗ್ಗಳಿಕೆಯಲ್ಲಿದ್ದ ಕೂ ಧ್ವನಿ ನಿಂತಂತಾಗಿದೆ.

 

Advertisement
Next Article