For the best experience, open
https://m.bcsuddi.com
on your mobile browser.
Advertisement

ಭಾರತದ ಮೊದಲ AI ಯೂನಿಕಾರ್ನ್ ಆಗಿ ಹೊರಹೊಮ್ಮಿದ ಕೃತ್ರಿಮ್‌!

01:52 PM Jan 27, 2024 IST | Bcsuddi
ಭಾರತದ ಮೊದಲ ai ಯೂನಿಕಾರ್ನ್ ಆಗಿ ಹೊರಹೊಮ್ಮಿದ ಕೃತ್ರಿಮ್‌
Advertisement

ನವದೆಹಲಿ: ಓಲಾ ಮಾಲಿಕ ಭವಿಶ್ ಅಗರ್ವಾಲ್ ಸ್ಥಾಪಿಸಿರೋ ಭಾರತದ AI ಸ್ಟಾರ್ಟ್‌ ಅಪ್‌ ಕೃತ್ರಿಮ್‌ ಹೊಸ ವರ್ಷದ ಮೊದಲ ಯೂನಿಕಾರ್ನ್‌ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೃತ್ರಿಮ್‌ $50 ಮಿಲಿಯನ್‌ನಿಧಿಯನ್ನ ಸಂಗ್ರಹಿಸುವ ಮೂಲಕ ಮೂಲಕ 1 ಬಿಲಿಯನ್‌ ಮೌಲ್ಯ ತಲುಪಿದೆ.

ಎಐ ಸ್ಟಾರ್ಟ್ಅಪ್ ಕೃತ್ರಿಮ್‌ ಸಂಸ್ಥೆ ಗೆ ಮ್ಯಾಟ್ರಿಕ್ಸ್ ಪಾರ್ಟ್‌ನರ್ಸ್ ಇಂಡಿಯಾ ಮತ್ತು ಇತರ ಹೂಡಿಕೆದಾರರು ಮಾರುಕಟ್ಟೆ ಮೌಲ್ಯವನ್ನು $ 1 ಬಿಲಿಯನ್‌ಗೆ ತಲುಪುವಂತೆ ಹೂಡಿಕೆ ಮಾಡಿದ್ದಾರೆ. ಇದರೊಂದಿಗೆ ಇದು ದೇಶದ ಮೊದಲ ಎಐ ಯೂನಿಕಾರ್ನ್‌ ಸ್ಟಾರ್ಟ್‌ಅಪ್ ಇದಾಗಿದೆ. ಅಲ್ಲದೆ ದೇಶದ ಅತ್ಯಂತ ವೇಗದ ಸ್ಟಾರ್ಟ್‌ಅಪ್ ಯೂನಿಕಾರ್ನ್ ಸಹ ಇದಾಗಿದೆ.

ಕೃತ್ರಿಮ್‌ ಅಂದ್ರೆ ಸಂಸ್ಕೃತದಲ್ಲಿ ಕೃತಕ ಅಥವಾ ಆರ್ಟಿಫಿಷಿಯಲ್‌ ಅಂತ ಅರ್ಥ ಎಂಬರ್ಥವಿದೆ. ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನೇಕ ಭಾರತೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ ಅವುಗಳಲ್ಲಿ ಸುಲಭವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಭಾರತದ ಈ AI, ಚಾಟ್‌ GPTಗೆ ಕಾಂಪಿಟ್‌ ಕೊಡಬಹುದು ಎಂದು ಅಂದಾಜಿಸಲಾಗಿದೆ.

Advertisement

ಕನ್ನಡ, ತಮಿಳ್‌, ಹಿಂದಿ, ತೆಲುಗು ಹೀಗೆ 10 ಭಾಷೆಯಲ್ಲಿ ಕೃತ್ರಿಮ್‌ ಕಂಟೆಂಟ್‌ ಕೊಡುತ್ತೆ. 20 ಭಾಷೆಗಳನ್ನ ಅರ್ಥ ಮಾಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.

Author Image

Advertisement