ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಭಾನುವಾರ ಸುರಿದ ಮಳೆ: ರಾಮಗಿರಿಯಲ್ಲಿ 6.4 ಮಿ.ಮೀ ಮಳೆ

08:11 AM Jul 23, 2024 IST | Bcsuddi
Advertisement

 

Advertisement

ಚಿತ್ರದುರ್ಗ: ಭಾನುವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 6.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 1.4 ಮಿ.ಮೀ, ಚಿಕ್ಕಜಾಜೂರು 5.8 ಮಿ.ಮೀ, ಬಿ.ದುರ್ಗ 4 ಮಿ.ಮೀ, ಹೆಚ್.ಡಿ.ಪುರ 2.6 ಮಿ.ಮೀ, ತಾಳ್ಯ 2 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 1.5 ಮಿ.ಮೀ, ರಾಯಾಪುರ 1.5 ಮಿ.ಮೀ ದೇವಸಮುದ್ರದಲ್ಲಿ 1.2 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 1 ಮಿ.ಮೀ, ನಾಯಕನಹಟ್ಟಿ 2.4ಮಿ.ಮೀ, ತಳಕು 1.2 ಮಿ.ಮೀ ಹಾಗೂ ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 0.8 ಮಿ.ಮೀ ಮಳೆಯಾಗಿದೆ.  ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 2 ಮಿ.ಮೀ, ಚಿತ್ರದುರ್ಗ-2ರಲ್ಲಿ 2.4 ಮಿ.ಮೀ, ಐನಹಳ್ಳಿ 3.6 ಮಿ.ಮೀ, ಭರಮಸಾಗರ 4 ಮಿ.ಮೀ, ಸಿರಿಗೆರೆ 4.4 ಮಿ.ಮೀ ಮಳೆಯಾಗಿದೆ.

9 ಮನೆಗಳು ಭಾಗಶಃ ಹಾನಿ: ಭಾನುವಾರ ಸುರಿದ ಮಳೆಗೆ ಜಿಲ್ಲಾಯಾದ್ಯಂತ ಒಟ್ಟು ಭಾಗಶಃ 9 ಮನೆಗಳು ಹಾನಿಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಭಾಗಶಃ 7 ಮನೆಗಳು ಮತ್ತು ಹೊಸದುರ್ಗ ತಾಲ್ಲೂಕಿನಲ್ಲಿ ಭಾಗಶಃ 2 ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Tags :
ಭಾನುವಾರ ಸುರಿದ ಮಳೆ: ರಾಮಗಿರಿಯಲ್ಲಿ 6.4 ಮಿ.ಮೀ ಮಳೆ
Advertisement
Next Article