For the best experience, open
https://m.bcsuddi.com
on your mobile browser.
Advertisement

ಭರಮಸಾಗರ ಹೋಬಳಿ: 08 ಅಂಗನವಾಡಿ ಕಾರ್ಯಕರ್ತೆ, 21 ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

08:00 AM Aug 04, 2024 IST | BC Suddi
ಭರಮಸಾಗರ ಹೋಬಳಿ  08 ಅಂಗನವಾಡಿ ಕಾರ್ಯಕರ್ತೆ  21 ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
Advertisement

ಚಿತ್ರದುರ್ಗ: ಭರಮಸಾಗರ ಹೋಬಳಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 8 ಅಂಗನವಾಡಿ ಕಾರ್ಯಕರ್ತೆ ಮತ್ತು 21 ಸಹಾಯಕಿಯರ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ನೇಮಿಸಲು ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ರಿಂದ 35 ವರ್ಷ ವಯೋಮಿತಿಯೊಳಗಿರಬೇಕು ಹಾಗೂ ವಿಕಲಚೇನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪಿಯುಸಿ ತೇರ್ಗಡೆ ಹೊಂದಿರಬೇಕು. ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಸಹಾಯಕಿಯರ ಹುದ್ದೆಗೆ ಕನಿಷ್ಠ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

Advertisement

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು  https://karnemakaone.kar.nic.in/abcd/ವೆಬ್‌ಸೈಟ್‌ನಲ್ಲಿ ನೀಡಿರುವ ನೇಮಕಾತಿಯ ಮಾರ್ಗಸೂಚಿ ಹಾಗೂ ನಿಬಂಧನೆಗಳನ್ನು ಸ್ಪಷ್ಟವಾಗಿ ಓದಿಕೊಂಡು ನೀಡಲಾಗಿರುವ ಸೂಚನೆಯಂತೆ ಅರ್ಜಿಗಳನ್ನು ಭರ್ತಿ ಮಾಡಿ, ಅವಶ್ಯಕ ದೃಢೀಕೃತ ದಾಕಲೆಗಳನ್ನು ಡಿ.ಜಿ.ಲಾಕರ್ ಬಳಸಿ ಸ್ಕಾö್ಯನ್ ಮಾಡಿ ಅರ್ಜಿ ಸಲ್ಲಿಸಬೇಕು. ಆನ್ಲೆöÊನ್ ಮೂಲಕವೇ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಬೇಕು. ಅಂಚೆ ಅಥವಾ ಕೊರಿಯರ್ ಮೂಲಕ ಅರ್ಜಿ ಸಲ್ಲಿಸುವ ಭೌತಿಕ ದಾಖಲಾತಿಗಳನ್ನು ಪರಿಗಣಿಸಲಾಗುದಿಲ್ಲ.

ಅಂಗನವಾಡಿ ಕಾರ್ಯಕರ್ತೆಯರ ಮೀಸಲಾತಿ ವಿವರ:

ಭರಮಸಾಗರ ಗ್ರಾ.ಪಂ.ನ ಕೋಡಿರಂಗವ್ವನಹಳ್ಳಿ, ಆಲಗಟ್ಟ ಗ್ರಾ.ಪಂ.ನ ದೊಡ್ಡಾಲಗಟ್ಟ-ಎ, ಹಿರೇಗುಂಟೂರು ಗ್ರಾ.ಪಂ.ನ ಹೊಸೂರುಕಟ್ಟೆ, ಸಿರಿಗೆರೆ ಗ್ರಾ.ಪಂ.ನ ಸಿರಿಗೆರೆ-ಎ, ಚಿಕ್ಕಬೆನ್ನೂರು ಗ್ರಾ.ಪಂ.ನ ಚಿಕ್ಕಬೆನ್ನೂರು-ಎ ಅಂಗನವಾಡಿ ಕೇಂದ್ರಗಳ ಹುದ್ದೆ ಇತರೆ ವರ್ಗಕ್ಕೆ ಮತ್ತು ಎಂ.ಕೆ.ಹಟ್ಟಿ ಗ್ರಾ.ಪಂ.ನ ಸೀಬಾರ, ಲಕ್ಷಿö್ಮÃಸಾಗರ ಗ್ರಾ.ಪಂ.ನ ಗೂಳಯ್ಯನಹಟ್ಟಿ-ಎ ಅಂಗನವಾಡಿ ಕೇಂದ್ರದ ಹುದ್ದೆ ಪರಿಶಿಷ್ಟ ಜಾತಿಗೆ ಹಾಗೂ ಗೋನೂರು ಗ್ರಾ.ಪಂ.ನ ಮುತ್ತಯ್ಯನಹಟ್ಟಿ ಅಂಗನವಾಡಿ ಕೇಂದ್ರದ ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ಅಂಗನವಾಡಿ ಸಹಾಯಕಿಯರ ಮೀಸಲಾತಿ ವಿವರ:

ಚಿಕ್ಕಬೆನ್ನೂರು ಗ್ರಾ.ಪಂ.ನ ಚಿಕ್ಕಬೆನ್ನೂರು-ಬಿ, ಲಕ್ಷಿö್ಮÃಸಾಗರ ಗ್ರಾ.ಪಂ.ನ ಕಿಟ್ಟದಹಟ್ಟಿ, ಜಿ.ಆರ್.ಹಳ್ಳಿ ಗ್ರಾ.ಪಂ.ನ ಆಯಿತೋಳು-ಎ, ಹಿರೇಗುಂಟನೂರು ಗ್ರಾ.ಪಂ.ನ ಹಿರೇಗುಂಟನೂರು-ಬಿ, ಮಾಡನಾಯ್ಕನಹಳ್ಳಿ ಗ್ರಾ.ಪಂ.ನ ಸುಲ್ತಾನಿಪುರ-ಎ, ಕೋಳಹಾಳ್ ಗ್ರಾ.ಪಂ.ನ ಕೋಳಹಾಳ್-ಎ ಹಾಗೂ ಎಮ್ಮೇಹಟ್ಟಿ-ಎ, ಬೊಮ್ಮೇನಹಳ್ಳಿ ಗ್ರಾ.ಪಂ.ನ ಬೊಮ್ಮೇನಹಳ್ಳಿ ಎಸ್.ಸಿ ಕಾಲೋನಿ ಇತರೆ ವರ್ಗಕ್ಕೆ ಮೀಸಲಿವೆ.

ಹಿರೇಗುಂಟನೂರು ಗ್ರಾ.ಪಂ.ನ ಕೊಡಗವಳ್ಳಿ-ಎ, ಲಕ್ಷಿö್ಮÃಸಾಗರ ಗ್ರಾ.ಪಂ.ನ ಗೂಳಯ್ಯನಹಟ್ಟಿ-ಎ, ಅಳಗವಾಡಿ ಗ್ರಾ.ಪಂ.ನ ದೊಡ್ಡಿಗನಾಳ್ ಹೊಸಹಟ್ಟಿ, ದ್ಯಾಮವ್ವನಹಳ್ಳಿ ಗ್ರಾ.ಪಂ.ನ ಬೊಮ್ಮೇನಹಳ್ಳಿ, ಚಿಕ್ಕಗೊಂಡನಹಳ್ಳಿ ಗ್ರಾ.ಪಂ.ನ ಚಿಕ್ಕಗೊಂಡನಹಳ್ಳಿ-ಬಿ, ಸಿರಿಗೆರೆ ಗ್ರಾ.ಪಂ.ನ ಹಳೇರಂಗಾಪುರ-ಎ, ಭರಮಸಾಗರ ಗ್ರಾ.ಪಂ.ನ ಬೇವಿನಹಳ್ಳಿ-ಬಿ, ಇಸಾಮುದ್ರ ಗ್ರಾ.ಪಂ.ನ ಇಸಾಮುದ್ರ ಗೊಲ್ಲರಹಟ್ಟಿ-ಎ, ಹುಲ್ಲೂರು ಗ್ರಾ.ಪಂ.ನ ಹುಲ್ಲೂರು ಎಸ್.ಸಿ ಕಾಲೋನಿ ಅಂಗನವಾಡಿ ಕೇಂದ್ರಗಳು ಹುದ್ದೆ ಪರಿಶಿಷ್ಟ ಜಾತಿಗೆ ಹಾಗೂ ಲಕ್ಷಿö್ಮÃಸಾಗರ ಗ್ರಾ.ಪಂ.ನ ಕಿಟ್ಟದಹಳ್ಳಿ, ತುರುವನೂರು ಗ್ರಾ.ಪಂ.ನ ತುರುವನೂರು-ಸಿ, ಸಿರಿಗೆರೆ ಗ್ರಾ.ಪಂ.ನ ಸಿರಿಗೆರೆ-ಸಿ, ಇಸಾಮುದ್ರ ಗ್ರಾ.ಪಂ.ನ ಇಸಾಮುದ್ರ ಹೊಸಹಟ್ಟಿ ಗಿರಿಜನ ಕಾಲೋನಿ ಅಂಗನವಾಡಿ ಕೇಂದ್ರಗಳು ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ.

ಹೆಚ್ಚಿನ ಮಾಹಿತಿಗಾಗಿ ನಗರದ ಆರ್.ಟಿ.ಓ ಕಚೇರಿ ರಸ್ತೆ, ಬಸಪ್ಪ ಆಸ್ಪತ್ರೆ ಹತ್ತಿರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08194-295540 ಗೆ ಸಂಪರ್ಕಿಸಲು ತಿಳಿಸಿದೆ.

Tags :
Author Image

Advertisement