ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಭರತ್ಯನಾಟ್ಯ ನೃತ್ಯವಷ್ಟೇ ಅಲ್ಲ, ಅದರಾಚೆ ಇದೆ ಬಹಳಷ್ಟು ಉಪಯೋಗ:  ಡಾ.ನಂದಿನಿ ಶಿವಪ್ರಕಾಶ್

05:59 PM Jun 07, 2024 IST | Bcsuddi
Advertisement

 

Advertisement

 

ಆದರೆ, ಅದನ್ನು ಹೊರತುಪಡಿಸಿ ಭರತನಾಟ್ಯ ಆತ್ಮವಿಶ್ವಾಸ ವೃದ್ಧಿಸುವ, ಓದಿನಲ್ಲಿ ಆಸಕ್ತಿ ಮೂಡಿಸುವ, ಮುಖ್ಯವಾಗಿ ಮನುಷ್ಯ ಮಾನವನಾಗಲು, ಸಂಸ್ಕಾರವಂತನಾಗಲು ಬುನಾದಿ ಹಾಕುವ ಪ್ರಮುಖ ಕಲೆ ಆಗಿದೆ.

ಭರತನಾಟ್ಯ ಕ್ಷೇತ್ರದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿರುವ, 40 ವರ್ಷಗಳಿಂದ ಭರತನಾಟ್ಯ ಕಲೆ ಮೂಲಕ ಮಧ್ಯಕರ್ನಾಟಕದಲ್ಲಿ ಮನೆಮಾತಾಗಿರುವ ಡಾ.ನಂದಿನಿ ಶಿವಪ್ರಕಾಶ್ ಅವರು bcsuddi.com ಜೊತೆ (June 7, 20024, ಶುಕ್ರವಾರ) ಮಾತನಾಡಿದ್ದಾರೆ.

ಭರತನಾಟ್ಯ ಕಲೆಯ ಮಹತ್ವ, ಅದರಿಂದ ಜೀವನದಲ್ಲಿ ಆಗುವ ಮಹತ್ವದ ಬದಲಾವಣೆ, ಸಾಧನೆಗೆ ಆಗುವ ಸಹಕಾರ, ಅದರಲ್ಲೂ ವಿದ್ಯಾರ್ಥಿಗಳಲ್ಲಿ ಓದಿನಲ್ಲಿ ಆಸಕ್ತಿ ಹೆಚ್ಚಿಸುವ, ಮುಖ್ಯವಾಗಿ ಸಂಸ್ಕಾರ ಹೇಗೆ ವ್ಯಕ್ತಿಯಲ್ಲಿ ಪ್ರವೇಶ ಮಾಡುತ್ತದೆ ಎಂಬ ಕುರಿತು ಮಾತನಾಡಿದ್ದಾರೆ.

ಅದರಲ್ಲೂ ದಾರಿ ತಪ್ಪಿದ ಈಗಿನ ಶಿಕ್ಷಣಕ್ಕೆ ಭರತನಾಟ್ಯ , ಸಂಗೀತ ಸೇರಿ ವಿವಿಧ ಕಲಾಪ್ರಕಾರಗಳು ಹೇಗೆ ಮದ್ದು ಆಗಲಿವೆ. ಅಂಕ ಗಳಿಕೆ ಬೆನ್ನತ್ತಿರುವ ಪಾಲಕರು, ಶಿಕ್ಷಣದ ಜೊತೆ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಕಲೆಗೆ ನೀರೆರದರೇ ಮಕ್ಕಳ ಭವಿಷ್ಯ ಹೇಗೆ ಉನ್ನತಮಟ್ಟದತ್ತ ಸಾಗುತ್ತದೆ..... ಹೀಗೆ ಅನೇಕ ವಿಷಯಗಳನ್ನು ಅದ್ಭತವಾಗಿ Dr.Nandini Shivaprakash ಬಿಸಿಸುದ್ದಿ ಜೊತೆ ಮಾತನಾಡಿದ್ದಾರೆ. ಪಾಲಕರು ಅವರ ಮಾತುಗಳನ್ನು ಆಲಿಸಿ, ಪಾಲಿಸಿದರೆ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂಬುದು ಬಿಸಿಸುದ್ದಿ ಬಳಗದ ಆಶಯ.

ಕಾರ್ಯಕ್ರಮಗಳ ಒತ್ತಡ, ನೃತ್ಯ ಶಾಲೆ ನಡೆಸುವ ಜವಾಬ್ದಾರಿ, ನಿರಂತರ ಓದು,,,, ಹೀಗೆ ವಿವಿಧ ಕಾರಣಕ್ಕೆ ಸದಾ ಚಟುವಟಿಕೆಯಿಂದ ಇರುವ ಅವರು ಬಿಡುವ ಮಾಡಿಕೊಂಡು bcsuddi.com ಕಚೇರಿಗೆ ಆಗಮಿಸಿ ಸಾರ್ವಕನಿಕರು, ಅದರಲ್ಲೂ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿ ಅನೇಕ ಅಂಶಗಳನ್ನು ಸಂದರ್ಶನದಲ್ಲಿ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬಿಸಿಸುದ್ದಿ ಓದುಗರು, bcsuddi.com ಯೂಟ್ಯೂಬ್ ಚಾನಲ್ ನಲ್ಲಿ ನೋಡಬಹುದು.

ಧನ್ಯವಾದಗಳು

*ಚಳ್ಳಕೆರೆ ಬಸವರಾಜ್*

ಸಂಪಾದಕರು, bcsuddi.com

ಮೊ.ನಂ: 9916881352

 

Tags :
ಅದರಾಚೆ ಇದೆ ಬಹಳಷ್ಟು ಉಪಯೋಗ:  ಡಾ.ನಂದಿನಿ ಶಿವಪ್ರಕಾಶ್ಭರತ್ಯನಾಟ್ಯ ನೃತ್ಯವಷ್ಟೇ ಅಲ್ಲ
Advertisement
Next Article