ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಭಯೋತ್ಪಾದಕರಿಗೆ ಸೇರಿದ ಭಾರಿ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರಗಳು ವಶಕ್ಕೆ

11:04 AM Oct 06, 2024 IST | BC Suddi
Advertisement

ಪೂಂಚ್ : ಭಯೋತ್ಪಾದಕರಿಗೆ ಸೇರಿದ ಭಾರಿ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸೇನೆಯ ರೋಮಿಯೊ ಪಡೆಯು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಜುಲಾಸ್‌ನಲ್ಲಿ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಸೇನೆಯು ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಿದ್ದು, ಭಯೋತ್ಪಾದಕರಿಗೆ ಸೇರಿದ ಭಾರಿ ಪ್ರಮಾಣದ ಸ್ಫೋಟಕ ಇರುವ ಚೀಲಗಳನ್ನು ವಶಕ್ಕೆ ಪಡೆದಿದೆ. ವಶಕ್ಕೆ ಪಡೆದ ಈ ಚೀಲದಲ್ಲಿ ಎಕೆ 47, ಪಾಕಿಸ್ತಾನದಲ್ಲಿ ತಯಾರಿಸಿರುವ ಪಿಸ್ತೂಲ್ ಮತ್ತು ಅತ್ಯಾಧುನಿಕ ಸ್ಫೋಟಕಗಳು, ಚೀನಾ ಗ್ರೆನೇಡ್‌ಗಳು ಸೇರಿದಂತೆ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ.

ಅಕ್ಟೋಬರ್ 5ರಂದು, ವಿಶ್ವಾಸಾರ್ಹ ಮೂಲಗಳ ಮಾಹಿತಿಯ ಆಧಾರದ ಮೇಲೆ ಜುಲಾಸ್ ಪ್ರದೇಶದಲ್ಲಿ ಭಾರತೀಯ ಸೇನೆಯ ರೋಮಿಯೊ ಪಡೆ ಪ್ರಮುಖ ಶೋಧ ಕಾರ್ಯಾಚರಣೆಯನ್ನು ನಡೆಸಿತು. ಶೋಧದ ಸಮಯದಲ್ಲಿ ಶಂಕಿತ ಭಯೋತ್ಪಾದಕರ ಬ್ಯಾಗ್ ಪತ್ತೆಯಾಗಿದ್ದು, ಎಕೆ 47 ಗನ್‌ಗಳು, ಪಾಕಿಸ್ತಾನದ ಪಿಸ್ತೂಲ್, ಹಲವು ಸುತ್ತುಗಳ ಗುಂಡು, ಅತ್ಯಾಧುನಿಕ ಸ್ಫೋಟಕಗಳಾದ ಆರ್‌ಸಿಐಇಡಿ, ಟೈಮ್ಸ್ ಡಿಸ್ಟ್ರಿಕ್ಷನ್ ಐಇಡಿ, ಸ್ಟವ್ ಐಇಡಿ, ಐಇಡಿ ಸ್ಫೋಟಕಗಳು ಮತ್ತು ಚೈನೀಸ್ ಗ್ರೆನೇಡ್‌ಗಳು ಪತ್ತೆಯಾಗಿವೆ. ಎಲ್ಲವೂ ಬಳಸಲು ಸಿದ್ಧ ಸ್ಥಿತಿಯಲ್ಲಿವೆ ಎಂದು ಸೇನೆ ಪ್ರಕಟಣೆಯಲ್ಲಿ ಹೇಳಿದೆ.

Advertisement
Next Article