ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬ್ರಿಟಿಷ್ ನೌಕಾಪಡೆ ವಶದಲ್ಲಿದ್ದ ತಮಿಳುನಾಡಿನ 35 ಮೀನುಗಾರರ ಬಿಡುಗಡೆ

01:51 PM Nov 21, 2023 IST | Bcsuddi
Advertisement

ತಮಿಳುನಾಡು: ಮೀನುಗಾರಿಕೆಗೆ ತೆರಳಿ ಬ್ರಿಟನ್ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ 35 ಮೀನುಗಾರರನ್ನು ಸೋಮವಾರ ಭಾರತೀಯ ಕೋಸ್ಟ್ ಗಾರ್ಡ್‌ಗೆ ಹಸ್ತಾಂತರಿಸಲಾಯಿತು.

Advertisement

ಕಳೆದ ಸೆ. 29 ರಂದು ತಮಿಳುನಾಡಿನ ಮೀನುಗಾರರು ಹಿಂದೂ ಮಹಾಸಾಗರದ ಕರಾವಳಿಯಿಂದ ಸುಮಾರು 230
ನಾಟಿಕಲ್ ಮೈಲುಗಳಷ್ಟು ಆಳ ಸಮುದ್ರದ ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಬ್ರಿಟನ್ ಹಡಗು ಗ್ರಾ ಮ್ಪಿಯನ್ ಎಂಡ್ಯೂರೆನ್ಸ್ನಿಂದ ತಮಿಳುನಾಡಿನ ಮೀನುಗಾರರನ್ನು ಬಂಧಿಸಿತ್ತು.

ಎರಡು ಬೋ ಟ್ ಗಳಲ್ಲಿ ಮೀನುಗಾರಿಕೆಗೆ ತೆರಳಿದ್ದ ತಮಿಳುನಾಡಿನ ಮೀನುಗಾರರಿಗೆ ಬ್ರಿಟನ್ ನೌಕಾಪಡೆ ಪ್ರತಿ ಹಡಗಿಗೆ ತಲಾ 25,000 ಬ್ರಿಟಿಷ್ ಪೌಂ ಡ್ಗಳಷ್ಟು ದಂಡ ವಿಧಿಸಿದೆ. ಈ ವೇಳೆ ದಂಡ ಪಾವತಿಸದ ಕಾರಣ ಒಂದು ಹಡಗನ್ನುವಶಪಡಿಸಿಕೊಳ್ಳಲಾಗಿದ್ದು, ಇದೀಗ ಸುಮಾರು  ಎರಡು ತಿಂಗಳ ಬಳಿಕ ದಂಡ ಕಟ್ಟಿದ ಕರಾವಳಿ ರಕ್ಷಣಾ ಪಡೆ ಬ್ರಿಟನ್ ವಶದಲ್ಲಿದ್ದ35 ಮೀನುಗಾರರನ್ನು ಬಿಡುಗಡೆಗೊಳಿಸಿದೆ.

ಎಎನ್‌ಐ ಪ್ರಕಾರ, ಭಾರತೀಯ ಕೋಸ್ಟ್ ಗಾರ್ಡ್ ಅಧಿಕಾರಿಗಳು, "ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶ (BIOT) ಆಡಳಿತದಿಂದ ಬಂಧಿಸಲ್ಪಟ್ಟ ಭಾರತೀಯ ಮೀನುಗಾರರನ್ನು ಸೋಮವಾರ ಭಾರತೀಯ ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸಲಾಗಿದೆ" ಎಂದು ಹೇಳಿದ್ದಾರೆ.

ಎಲ್ಲಾ ಮೀನುಗಾರರು ಸುರಕ್ಷಿತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಮತ್ತು ಸಂಪೂರ್ಣ ಜಂಟಿ ತನಿಖೆ, ವೈದ್ಯಕೀಯ ತಪಾಸಣೆಯ ನಂತರ ಅವರನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅವರೆಲ್ಲರನ್ನೂ ಐಸಿಜಿಎಸ್ ಅನಘ್ ಮತ್ತು ಸಿ 441 ಮೂಲಕ ಕರೆತರಲಾಗಿದೆ" ಎಂದು ಅವರು ಹೇಳಿದರು.

 

Advertisement
Next Article