ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬ್ಯಾಂಕ್ ಆಫ್ ಬರೋಡಾದಿಂದ 600ಕ್ಕೂ ಹೆಚ್ಚು ಹುದ್ದೆಗೆ ಬೃಹತ್ ನೇಮಕಾತಿ

09:57 AM Jun 18, 2024 IST | Bcsuddi
Advertisement

ಬ್ಯಾಂಕ್ ಆಫ್ ಬರೋಡದಲ್ಲಿ(Bank of Baroda job) 600ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅಭ್ಯರ್ಥಿಗಳನ್ನು ಕಾಯಂ ಮತ್ತು ಗುತ್ತಿಗೆ ಆಧಾರಿತ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ನೇಮಕಾತಿಯ ಪೂರ್ಣ ವಿವರ ಕೆಳಗಿದೆ.

Advertisement

Bank of Baroda 627 Vacancy's : ಮ್ಯಾನೇಜರ್, ಪ್ರೇಸಿಡೆಂಟ್, ಗ್ರೂಪ್ ಸೇಲ್ಸ್ ಹೆಡ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಅರ್ಜಿ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಅಸಕ್ತರು ಈ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಈಗಲೇ ಅರ್ಜಿ ಸಲ್ಲಿಸಿ.

ನೇಮಕಾತಿ ಸಂಕ್ಷಿಪ್ತ ವಿವರ : 

• ನೇಮಕಾತಿ ಸಂಸ್ಥೆ : ಬ್ಯಾಂಕ್ ಆಫ್ ಬರೋಡಾ• ಒಟ್ಟು ಹುದ್ದೆಗಳ ಸಂಖ್ಯೆ : 627 ಹುದ್ದೆಗಳು • ಅರ್ಜಿ ಸಲ್ಲಿಸುವುದು : ಆನ್ಲೈನ್ ಮುಖಾಂತರ • ಉದ್ಯೋಗ ಸ್ಥಳ : All India

ಹುದ್ದೆಗಳ ವಿವರ : 

ಈ ನೇಮಕಾತಿಯನ್ನು ಕಾಯಂ ಮತ್ತು ಗುತ್ತಿಗೆ ಆಧಾರಿತ ಎರಡು ವಿಧಗಳಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು ಹುದ್ದೆಗಳ ವಿಂಗಡಣೆಯು ಈ ಕೆಳಗಿನಂತಿದೆ.• ಖಾಯಂ ಆಧಾರಿತ ನೇಮಕ ಹುದ್ದೆಗಳು : 168 ಹುದ್ದೆಗಳು • ಗುತ್ತಿಗೆ ಆಧಾರಿತ ನೇಮಕ ಹುದ್ದೆಗಳು : 459 ಹುದ್ದೆಗಳು • ಒಟ್ಟು ನೇಮಕಾತಿ ಹುದ್ದೆಗಳು : 627 ಹುದ್ದೆಗಳು

ನೇಮಕಾತಿಯ ಪ್ರಮುಖ ದಿನಾಂಕಗಳು : 

• ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ • ಅರ್ಜಿ ಸಲ್ಲಿಸಲು ನಿಗದಿತ ಕೊನೆಯ ದಿನಾಂಕ : ಜುಲೈ 02, 2024

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಹತೆಗಳು : 

ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಬಿಇ /ಬಿ. ಟೆಕ್ ಸೇರಿದಂತೆ ಯಾವುದೇ ರೀತಿಯ ಪದವಿ ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ವಯೋಮಿತಿ ಮಾನದಂಡ : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 25 ವರ್ಷದಿಂದ ಗರಿಷ್ಟ 40 ವರ್ಷದ ವಯೋಮಿತಿ ಒಳಗಡೆ ಇರಬೇಕು.

ಅರ್ಜಿ ಶುಲ್ಕ : 

• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ - ₹100/-• ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ - ₹600/-

ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು : 

https://www.bankofbaroda.in/

Advertisement
Next Article