ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಳಗಾವಿ: ಬಿಜೆಪಿ ನಗರ ಸೇವಕ ಅಭಿಜಿತ್ ಜವಳಕರ್ ಅರೆಸ್ಟ್

10:44 AM Nov 27, 2023 IST | Bcsuddi
Advertisement

ಬೆಳಗಾವಿ: ನವೆಂಬರ್ 23ರಂದು ಭಾಗ್ಯನಗರದಲ್ಲಿ ಮೊಬೈಲ್ ಟವರ್ ಅನುಮತಿ ವಿಚಾರವಾಗಿ ಬಿಜೆಪಿ ನಗರ ಸೇವಕ ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ತಡರಾತ್ರಿಯಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ನಂಬರ್ 42ರ ಬಿಜೆಪಿ ಸದಸ ಅಭಿಜಿತ್ ಜವಳಕರ್ ಅರೆಸ್ಟ್ ಅವರನ್ನು ಟಿಳಕವಾಡಿ ಪೊಲೀಸರು ತಡರಾತ್ರಿ ಬಂಧಿಸಿ ಹಿಂಡಲಗಾ ಜೈಲಿಗಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಭಿಜಿತ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಪೊಲೀಸರ ಕ್ರಮ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ನಿನ್ನೆಯಷ್ಟೇ ಪಾಲಿಕೆ ಸದಸ್ಯ ಅಭಿಜಿತ್ ಬಂಧಿಸುವಂತೆ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ಬೆನ್ನಲ್ಲೇ ರಾತ್ರೋರಾತ್ರಿ ಬಿಜೆಪಿ ಪಾಲಿಕೆ ಸದಸ್ಯನ ಬಂಧಿಸಿದ್ದಾರೆ. ಇನ್ನು ಅಭಿಜಿತ್ ಅರೆಸ್ಟ್ ಆಗುತ್ತಿದ್ದಂತೆ ಬಿಮ್ಸ್ ಆಸ್ಪತ್ರೆ ಎದುರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಆಕ್ರೋಶ ಹೊರ ಹಾಕಿದರು. ಮೊಬೈಲ್ ಟವರ್ ವಿಚಾರವಾಗಿ ಪಾಲಿಕೆ ಸದಸ್ಯ ಅಭಿಜಿತ್ ಮತ್ತು ಸ್ಥಳೀಯ ನಿವಾಸಿ ರಮೇಶ್ ಪಾಟೀಲ್ ಮಧ್ಯೆ ಗಲಾಟೆ ನಡೆದಿತ್ತು. ಬಳಿಕ ಇಬ್ಬರೂ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ನೀಡಿದ್ದರು. ಹಲ್ಲೆ ಮಾಡಿದ ರಮೇಶ್ ಪಾಟೀಲ್ ಬಂಧಿಸುವಂತೆ ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಗೆ ಮಣಿದು ಪೊಲೀಸರು ರಮೇಶ್ ಪಾಟೀಲ್ ಅರೆಸ್ಟ್ ಮಾಡಿದ್ದರು. ಇದಾದ ನಂತರ ನಿನ್ನೆ ಸಂಜೆ ಎಂಇಎಸ್ ಕಾರ್ಯಕರ್ತರು ಪಾಲಿಕೆ ಸದಸ್ಯ ಅಭಿಜಿತ್ ಅರೆಸ್ಟ್ ಮಾಡುವಂತೆ ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಗೆ ಮಣಿದ ಪೋಲಿಸರು ಪಾಲಿಕೆ ಸದಸ್ಯನ ಬಂಧಿಸಿದ್ದಾರೆ.

Advertisement

Advertisement
Next Article