ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆತ್ತಲಾದ ಮತ್ತೊಬ್ಬ ನಟ..!

10:25 AM Dec 11, 2023 IST | Bcsuddi
Advertisement

ಮುಂಬೈ: ಬಾಲಿವುಡ್ ಸಿನಿಮಾ ನಟ ವಿದ್ಯುತ್ ಜಮಾವಾಲ್ ಅವರು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಹಿಮಾಲಯದಲ್ಲಿ ಸನ್ಯಾಸಿಯಂತೆ ಮೈ ಮೇಲೆ ಬಟ್ಟೆ ಧರಿಸದೆ ತಿರುಗಾಡುತ್ತಿದ್ದಾರೆ. ಇದೀಗ ಬೆತ್ತಲೆಯಾಗಿರುವ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟನ ಈ ಅವತಾರ ಕಂಡು ಅವರ ಫ್ಯಾನ್ಸ್‌ ಶಾಕ್‌ಗೆ ಒಳಗಾಗಿದ್ದಾರೆ.

Advertisement

ಹಿಮಾಲಯದ ತಪ್ಪಿಲಿನಲ್ಲಿ ನಟ ವಿದ್ಯುತ್ ಕಾಡು ಮತ್ತು ನದಿಗಳಲ್ಲಿ ಆದಿವಾಸಿಯಂತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ವಿದ್ಯುತ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಮೂರು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಮೊದಲನೆ ಫೋಟೋದಲ್ಲಿ ಬಟ್ಟೆಯಿಲ್ಲದೆ ನದಿಯ ಪಕ್ಕ ಕುಳಿತಿರುವುದು, ಎರಡನೆ ಫೋಟೋದಲ್ಲಿ ನೀರಿನಲ್ಲಿ ಸೂರ್ಯ ನಮಸ್ಕಾರ ಮಾಡುತ್ತಿರುವ ಭಂಗಿ ಹಾಗೆ ಅಡುಗೆ ಮಾಡುತ್ತಿರುವ ಮತ್ತೊಂದು ಫೋಟೊವನ್ನು ಹಂಚಿಕೊಂಡಿದ್ದಾರೆ.

ಇನ್ನು ತಮ್ಮ ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ನಟ ವಿದ್ಯುತ್ " ನನಗೆ ಈ ಹವ್ಯಾಸ 14 ವರ್ಷಗಳ ಹಿಂದೆ ಶುರುವಾಯ್ತು. ನನಗಿದು ಅರಿವಿಗೆ ಬರುವ ಮೊದಲೇ ಪ್ರತಿ ವರ್ಷ 7-10 ದಿನಗಳನ್ನು ನಾನು ಏಕಾಂಗಿಯಾಗಿ ಕಳೆಯಲು ಬಯಸುತ್ತೇನೆ. ಇದರೊಂದಿಗೆ ಐಷಾರಾಮಿ ಜೀವನದಿಂದ ಕಾಡಿಗೆ ಬಂದ ನಾನು ನನ್ನ ಏಕಾಂತತೆಯನ್ನು ಕಂಡುಕೊಂಡಿದ್ದೇನೆ. ‘ನಾನು ಯಾರು’ಎಂದು ತಿಳಿದುಕೊಳ್ಳುವ ಮೊದಲ ಹೆಜ್ಜೆ ಇದು. ಪ್ರಕೃತಿ ಒದಗಿಸಿದ್ದರಲ್ಲೇ ನನ್ನನ್ನು ನಾನೇ ರಕ್ಷಣೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಫೋಟೋ ನೋಡಿ ಟ್ರೋಲ್ ಮಾಡುತ್ತಿದ್ದಾರೆ.

Advertisement
Next Article