For the best experience, open
https://m.bcsuddi.com
on your mobile browser.
Advertisement

ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಭತ್ತ, ರಾಗಿ, ಜೋಳ ಖರೀದಿಗೆ ರೈತರ ನೋಂದಣಿ, ಪ್ರಕ್ರಿಯೆ ಪ್ರಾರಂಭ.!

07:47 AM Dec 19, 2023 IST | Bcsuddi
ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಭತ್ತ  ರಾಗಿ  ಜೋಳ ಖರೀದಿಗೆ ರೈತರ ನೋಂದಣಿ  ಪ್ರಕ್ರಿಯೆ ಪ್ರಾರಂಭ
Advertisement

ದಾವಣಗೆರೆ; ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಭತ್ತ ಮತ್ತು ರಾಗಿ ಖರೀದಿಸಲು ಜಿಲ್ಲೆಯ ರೈತರಿಂದ ನೋಂದಣಿಗೆ ಆಹ್ವಾನಿಸಲಾಗಿದೆ.

ರೈತರು ಬೆಳೆದ ಉತ್ತಮ ಗುಣಮಟ್ಟದ ರಾಗಿ ಮತ್ತು ಭತ್ತ ನೇರವಾಗಿ ನೋಂದಾಯಿತ ರೈತರಿಂದ ಖರೀದಿಸಲು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿಸಿದ್ದು, ರೈತರು ತಾವು ಬೆಳೆದ ಭತ್ತ ಮತ್ತು ರಾಗಿಯ ಗುಣಮಟ್ಟವನ್ನು ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಪರಿಶೀಲಿಸಬೇಕು.  ನಂತರ ರೈತರು ಕೃಷಿ ಇಲಾಖೆ ನೀಡಿರುವ ಫ್ರೂಟ್ಸ್ ಗುರುತಿನ ಸಂಖ್ಯೆಯೊಂದಿಗೆ ನೋಂದಣಿ

Advertisement

ರಾಗಿ ಪ್ರತಿ ಕ್ವಿಂಟಲ್‍ಗೆ ರೂ. 3,846 ಮತ್ತು ಭತ್ತ ಪ್ರತಿ ಕ್ವಿಂಟಲ್‍ಗೆ ಸಾಮಾನ್ಯ ರೂ. 2,183,    ಗ್ರೇಡ್-ಎ ಗೆ ರೂ. 2,203 ಗಳ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ರೈತರ ನೋಂದಣಿ ಪ್ರಕ್ರಿಯೆಯು ಕಡ್ಡಾಯವಾಗಿದ್ದು,ರಾಗಿ ಪ್ರತಿ ಕ್ವಿಂಟಲ್‍ಗೆ ರೂ. 3,846 ಮತ್ತು ಭತ್ತ ಪ್ರತಿ ಕ್ವಿಂಟಲ್‍ಗೆ ಸಾಮಾನ್ಯ ರೂ. 2,183,    ಗ್ರೇಡ್-ಎ ಗೆ ರೂ. 2,203 ಗಳ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ರೈತರ ನೋಂದಣಿ ಪ್ರಕ್ರಿಯೆಯು ಕಡ್ಡಾಯವಾಗಿರುತ್ತದೆ.

. ಫೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆ ಸಂಖ್ಯೆಗೆ ಆಃಖಿ ಮುಖಾಂತರ ನೇರವಾಗಿ ರೈತರ ಖಾತೆಗೆ ಹಣ ಸಂದಾಯ ಮಾಡಲಾಗುವುದು ಆದ್ದರಿಂದ ರೈತರು 'ಫೂಟ್ಸ್' ದತ್ತಾಂಶದಲ್ಲಿ ದಾಖಲಿಸಿರುವ ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದನ್ನು ಮತ್ತು ಎನ್‍ಪಿಸಿಐ(ಓPಅI) ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಖರೀದಿ ಕೇಂದ್ರಕ್ಕೆ ಆಧಾರ್ ಕಾರ್ಡ್ ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನೀಡಬೇಕು.

ರಾಗಿ ತಂದು ಖರೀದಿ ಕೇಂದ್ರದಲ್ಲಿ ರಾಶಿ ಹಾಕಬೇಕು. ರಾಗಿ ಗುಣಮಟ್ಟ ಪರಿಶೀಲಿಸಲು ಕೃಷಿ ಇಲಾಖೆಯಿಂದ ನೇಮಿಸಲ್ಪಟ್ಟ ಗುಣಮಟ್ಟ ಪರೀಕ್ಷಕರು ದಾಸ್ತಾನಿನ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು (ಎಫ್.ಎ.ಕ್ಯೂ) ಧೃಢಪಟ್ಟರೆ ಮಾತ್ರ ಖರೀದಿಸಲಾಗುವುದು. ಗುಣಮಟ್ಟ ಸರಿಯಿಲ್ಲವೆಂದು ದೃಢಪಡಿಸಿದ್ದಲ್ಲಿ ರೈತರು ತಮ್ಮ ಸ್ವಂತ ಖರ್ಚಿನಿಂದ ಹಿಂದಕ್ಕೆ ತೆಗೆದುಕೊಂಡು ಹೋಗಬೇಕು.

ರೈತರಿಂದ ಪ್ರತಿ ಎಕರೆಗೆ ರಾಗಿ 10.00ಕ್ವಿಂಟಲ್ ನಂತೆ ರೈತರು ಹೊಂದಿರುವ ಜಮೀನಿಗೆ ಅನುಗುಣವಾಗಿ ಖರೀದಿಸಲಾಗುವುದು. ಹಾಗೂ ರೈತರಿಂದ ಭತ್ತವನ್ನು ಪ್ರತಿ ಎಕರೆಗೆ ಭತ್ತ 25 ಕ್ವಿಂಟಲ್ ನಂತೆ ಗರಿಷ್ಠ 40 ಕ್ವಿಂಟಾಲ್ ಖರೀದಿಸಲಾಗುವುದು.

ರೈತರು ತರುವ ರಾಗಿ ಮತ್ತು ಭತ್ತದ ಎಲ್ಲಾ ಚೀಲಗಳನ್ನು ಖರೀದಿ ಕೇಂದ್ರಗಳಲ್ಲಿ ಒಂದಾಗಿ ಪರಿಶೀಲಿಸುವುದರಿಂದಾಗಿ ರೈತರು ತಾವು ತರುವ ಪದಾರ್ಥಗಳು ಒಂದೇ ತರಹದ್ದಾಗಿರಬೇಕು. ಒಂದು ವೇಳೆ ಗುಣಮಟ್ಟದಲ್ಲಿ ಯಾವುದೇ ನ್ಯೂನತೆ ಕಂಡುಬಂದಲ್ಲಿ ಸಂಪೂರ್ಣ ಪ್ರಮಾಣವನ್ನು ತಿರಸ್ಕರಿಸಲಾಗುವುದು.

ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ತಹಶೀಲ್ದಾರರು/ಉಪವಿಭಾಗಾಧಿಕಾರಿಗಳು/ ಉಪನಿರ್ದೇಶಕರು (ಆಹಾರ), ಕೃಷಿ ಮಾರುಕಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದು.  ದೂರುಗಳನ್ನು ದೂ.ಸಂ: 08192-296770, 9448496020 ನೀಡಬಹುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ ಪೋರ್ಸ್ ಸಮಿತಿಯ ಅಧ್ಯಕ್ಷರಾದ ಡಾ.ವೆಂಕಟೇಶ್.ಎಂ.ವಿ ತಿಳಿಸಿದ್ದಾರೆ.

Tags :
Author Image

Advertisement