ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಂಡೆಕಾಯಿಯ ಕುರುಕಲು ತಿಂಡಿ ಮಾಡುವ ವಿಧಾನ

09:02 AM May 18, 2024 IST | Bcsuddi
Advertisement

ಕುರುಕಲು ತಿನಿಸುಗಳು ಯಾವಾಗಲೂ ಗರಿ ಗರಿಯಾಗಿದ್ದರೆ ಮಾತ್ರ ತಿನ್ನಲು ರುಚಿಸುವುದು. ಗರಿಗರಿಯಾದ ಕುರುಕಲು ತಿಂಡಿ ಏನಾದರೂ ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಇದ್ದರೆ ಬಹಳ ಚೆನ್ನಾಗಿರುತ್ತದೆ.

Advertisement

ಬೇಕರಿಯಿಂದ ನೀವು ಯಾವಾಗಲೂ ಕುರುಕಲು ತಿಂಡಿ ತರೋದಕ್ಕಿಂತ ಮನೆಯಲ್ಲೇ ಏನಾದರೂ ಸಿಂಪಲ್ ಆಗಿ ಟ್ರೈ ಮಾಡಲು ಬಯಸಿದರೆ ಇಲ್ಲಿ ಹೇಳುವ ಬೆಂಡೆಕಾಯಿಯ ಈ ಕುರುಕಲು ತಿಂಡಿ ಟಿಪ್ಸ್‌ ಉಪಯೋಗಿಸಿ. ಚಹಾದೊಂದಿಗೆ ಸವಿಯಲು ಮಜವೆನಿಸುತ್ತದೆ. ಊಟದೊಂದಿಗೆ ಇದನ್ನು ಸೈಡ್ ಡಿಶ್ ಆಗಿಯೂ ಬಳಸಬಹುದು.

ಬೇಕಾಗುವ ಪದಾರ್ಥಗಳು:

ಬೆಂಡೆಕಾಯಿ : 200 ಗ್ರಾಂಅಕ್ಕಿ ಹಿಟ್ಟು :1 ಟೀಸ್ಪೂನ್ಕಡಲೆ ಹಿಟ್ಟು : 2 ಟೀಸ್ಪೂನ್ಕೆಂಪು ಮೆಣಸಿನಪುಡಿ : ಅರ್ಧ ಟೀಸ್ಪೂನ್ಆಮ್ಚೂರ್ ಪುಡಿ : ಕಾಲು ಟೀಸ್ಪೂನ್ಚಾಟ್ ಮಸಾಲಾ : 1 ಟೀಸ್ಪೂನ್ಉಪ್ಪು : ರುಚಿಗೆ ತಕ್ಕಷ್ಟುಎಣ್ಣೆ : ಹುರಿಯಲು ಬೇಕಾಗುವಷ್ಟು.

ಮಾಡುವ ವಿಧಾನ:

ಮೊದಲಿಗೆ ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಒಣ ಬಟ್ಟೆಯಿಂದ ಒರೆಸಿಕೊಳ್ಳಿ ನೀರಿನ ಅಂಶ ಇಲ್ಲದಾಗೆ ನೋಡಿಕೊಳ್ಳಿ.ಬೆಂಡೆಕಾಯಿಯ ಎರಡೂ ಬದಿಗಳನ್ನು ಕತ್ತರಿಸಿ, ತೆಳ್ಳಗಿನ ಹಾಗೂ ಉದ್ದವಾದ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.ಬಳಿಕ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನಪುಡಿ, ಆಮ್ಚೂರ್‌ಪುಡಿಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಂಡೆಕಾಯಿಗಳನ್ನು ಕುರುಕಲಾಗುವಂತೆ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ.ಬಳಿಕ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.ನಂತರ ಅದರ ಮೇಲೆ ಚಾಟ್ ಮಸಾಲಾವನ್ನು ಸಿಂಪಡಿಸಿ.ಇದೀಗ ಬೆಂಡೆಕಾಯಿಯ ಕುರುಕಲು ತಿಂಡಿ ಸವಿಯಲು ಸಿದ್ಧವಾಗಿದೆ.

Advertisement
Next Article