ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಂಗಳೂರು: ಸೆರೆಲ್ಯಾಕ್ ಪ್ಯಾಕೆಟ್‌ನಲ್ಲಿ ಡ್ರಗ್ಸ್‌ ಸಪ್ಲೈ.! - ಬಟ್ಟೆ ಮಾರೋಕೆ ಬಂದು ಡ್ರಗ್ ಮಾರುತ್ತಿದ್ದ ವಿದೇಶಿ ಪ್ರಜೆ ಸಿಸಿಬಿ ಬಲೆಗೆ

09:58 AM Jul 26, 2024 IST | Bcsuddi
Advertisement

ಬೆಂಗಳೂರು: ಮಕ್ಕಳು ಕುಡಿಯೋ ಸೆರೆಲ್ಯಾಕ್ ಪ್ಯಾಕೆಟ್‌ನಲ್ಲಿ ರಾಜ್ಯಕ್ಕೆ ಸಪ್ಲೈ ಮಾಡುತ್ತಿದ್ದ ಡ್ರಗ್ಸ್‌ ಜಾಲವನ್ನು ಸಿಸಿಬಿ ಮಾದಕ‌ದ್ರವ್ಯ ನಿಗ್ರಹದಳ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

Advertisement

ಮುಂಬೈನ ಡ್ರಗ್ಸ್‌ ಫ್ಯಾಕ್ಟರಿಲ್ಲಿ ತಯಾರಾಗುತ್ತಿದ್ದ ನಶೆ ಏರಿಸೋ ಎಂಡಿಎಂ ಪೌಡರ್‌ ಅನ್ನು ಸೆರೆಲ್ಯಾಕ್ ಬಾಕ್ಸ್ ಹಾಗೂ ಕಾರ್ನ್ ಪ್ಯಾಕ್‌ನಲ್ಲಿ ಎಂಡಿಎಂಎ ಡ್ರಗ್ಸ್‌ ಪ್ಯಾಕ್ ಮಾಡಿ ರಾಜ್ಯಕ್ಕೆ ಸಪ್ಲೈ ಮಾಡಲಾಗುತ್ತಿತ್ತು.‌ ಇಲ್ಲಿ ರಿಸೀವ್ ಮಾಡಿಕೊಂಡ ಡ್ರಗ್ಸ್‌ ಇದ್ದ ಸೆರೆಲ್ಯಾಕ್ ಮತ್ತು ಕಾರ್ನ್ ಪ್ಯಾಕ್‌ನಿಂದ ಬೇರೆ ಮಾಡಿ ಸಣ್ಣ ಸಣ್ಣ ಪ್ಯಾಕ್ ಮಾಡಿ ಡೀಲರ್ ಗಳಿಗೆ ಸಪ್ಲೈ ಮಾಡ್ತಿದ್ರು. ಅಂದಹಾಗೆ ಸಿಸಿಬಿ ಪೊಲೀಸ್‌ ಸೀಜ್ ಮಾಡಿರೋ ಎಂಡಿಎಂಎ ಡ್ರಗ್ ಮೌಲ್ಯ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಕೋಟಿ ರೂಪಾಯಿ ಆಗಿದೆ.

ನೈಜಿರೀಯಾ ಮೂಲದ ಆರೋಪಿ ಬಟ್ಟೆ ವ್ಯಾಪಾರ ಮಾಡೋ ಬ್ಯುಸಿನೆಸ್ ವೀಸಾದಲ್ಲಿ ನಗರಕ್ಕೆ ಬಂದು ಡ್ರಗ್ ಬ್ಯುಸಿನೆಸ್ ಮಾಡ್ತಿದ್ದ. ಎಲೆಕ್ಟ್ರಾನಿನ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಾಸನಪುರ ಮನೆಯಲ್ಲಿ ವಿದೇಶಿ ಪ್ರಜೆ ಸುಮಾರು ನಾಲ್ಕು ಕೆಜಿ ಡ್ರಗ್ಸ್‌ ಅನ್ನು ಮನೆಯಲ್ಲಿ ಗೋದಿ ಹಿಟ್ಟು ಒಣಗಿಸೋ ರೀತಿ ಒಣಹಾಕಿದ್ದ. ಸಿಸಿಬಿ ಪೊಲೀಸರು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಡ್ರಗ್ಸ್‌ ಪೆಡ್ಲರ್‌ನನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಮುಂಬೈನಿಂದ ಬರುತ್ತಿದ್ದ ಡ್ರಗ್ಸ್‌ ಅನ್ನು ಸಣ್ಣ ಸಣ್ಣ ಪ್ಯಾಕ್ ಮಾಡಿ ಗ್ರಾಮ್ ಲೆಕ್ಕದಲ್ಲಿ ಸ್ಥಳೀಯ ಡೀಲರ್ಸ್‌ಗೆ ಮಾರಲಾಗ್ತಿತ್ತು. ಸದ್ಯ ಆರೋಪಿಯನ್ನ ಬಂಧಿಸಿರೋ ಸಿಸಿಬಿ ಪೊಲೀಸ್ರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Advertisement
Next Article