For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ಸಿಬ್ಬಂದಿಗಳಿಗೆ ಶಾಕ್ ನೀಡಿದ ಬಿಎಂಟಿಸಿ..!

12:30 PM Jul 04, 2024 IST | Bcsuddi
ಬೆಂಗಳೂರು  ಸಿಬ್ಬಂದಿಗಳಿಗೆ ಶಾಕ್ ನೀಡಿದ ಬಿಎಂಟಿಸಿ
Advertisement

ಬೆಂಗಳೂರು: ಆಧಾರ್ ಕಾರ್ಡ್ ಗೆ ಪಾನ್ ಸಂಖ್ಯೆ ಲಿಂಕ್ ಮಾಡದವರಿಗೆ ಇನ್ಮುಂದೆ ದಂಡ ಬೀಳಲಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಧಾರ ಸಂಖ್ಯೆಗೆ ಪಾನ್ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯ ಈ ಕುರಿತು ಆದೇಶ‌ ಹೊರಡಿಸಿದ್ದ ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆ CBDT, ಆದರೂ ಆಧಾರ್‌ಗೆ ಪ್ಯಾನ್ ಸಂಖ್ಯೆ ಬಹುತೇಕ ಬಿಎಂಟಿಸಿ ಸಿಬ್ಬಂದಿ ಲಿಂಕ್ ಮಾಡಿಲ್ವಂತೆ, ಈ ಬಗ್ಗೆ ಬಿಎಂಟಿಸಿ ಲೆಕ್ಕಪತ್ರ ಇಲಾಖೆಯು ಹಲವಾರು ಬಾರಿ ಪತ್ರಗಳಲ್ಲಿ ತಿಳುವಳಿಕೆ ನೀಡಿತ್ತು. ಜೊತೆಗೆ ಆದಾಯ ತೆರಿಗೆ ವಿಷಯ ನಿರ್ವಾಹಕರುಗಳಿಗೆ ತರಬೇತಿ ನೀಡಿ ಮಾಹಿತಿ ನೀಡಲಾಗಿತ್ತು.ಆದ್ರು ಸಹ ಕೆಲ ಸಿಬ್ಬಂದಿಗಳು ಅಧಾರ ಹಾಗೂ ಪಾನ್ ಸಂಖ್ಯೆ ಜೋಡಣೆ ಮಾಡಿಸಿಲ್ಲಈ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ಸಂಸ್ಥೆಯ ಮೇಲೆ 20% ದಂಡ ವಿಧಿಸಿದ್ದು, ಡಿಮಾಂಡ್ ನೋಟಿಸ್ ಜಾರಿ ಮಾಡಿದೆ.ಆದ್ರಿಂದ ಆಧಾರ ಸಂಖ್ಯೆಗೆ ಪಾನ್ ಸಂಖ್ಯೆ ಜೋಡಣಿ ಆಗದೇ ಇರುವ ಸಿಬ್ಬಂದಿಗಳಿಗೆ 20% ದಂಡ ಬೀಳಲಿದ್ದು ಒಟ್ಟು ಆದಾಯದ ಮೇಲೆ (ಮಾಸಿಕ ವೇತನ) 20% ಆದಾಯ ತೆರಿಗೆಯನ್ನು ದಂಡವಾಗಿ ಪರಿಗಣಿಸಲು ಸೂಚನೆ ನೀಡಲಾಗಿದೆ. ಜೂನ್-2024 ತಿಂಗಳಲ್ಲಿ ಕಡ್ಡಾಯವಾಗಿ ಕಡಿತಗೊಳಿಸಲು ಸೂಚನೆ ನೀಡಿದ್ದು ಈ ಸಂಬಂಧ ಕ್ರಮವಹಿಸದೇ ಇದ್ರೆ ಘಟಕದ ಘಟಕ ವ್ಯವಸ್ಥಾಪಕರು, ಲೆಕ್ಕಪತ್ರ ಅಧೀಕ್ಷಕರು, ಮೇಲ್ವಚಾರಕರು, ಅದಾಯ ತೆರಿಗೆ ವಿಷಯ ನಿರ್ವಾಹಕರು ನೇರ ಹೊಣೆ ಆಗ್ತಾರೆ ಅಂತ ಆದೇಶ ರವಾನೆ ಆಗಿದೆ.

Author Image

Advertisement