For the best experience, open
https://m.bcsuddi.com
on your mobile browser.
Advertisement

ಬೆಂಗಳೂರು : ವಾಲ್ಮೀಕಿ ನಿಗಮದ ಕೋಟಿ ಕೋಟಿ ಹಣ ಗುಳುಂ ಪ್ರಕರಣ - 12 ಮಂದಿ ಬಂಧನ

06:15 PM Jul 10, 2024 IST | Bcsuddi
ಬೆಂಗಳೂರು   ವಾಲ್ಮೀಕಿ ನಿಗಮದ ಕೋಟಿ ಕೋಟಿ ಹಣ ಗುಳುಂ ಪ್ರಕರಣ   12 ಮಂದಿ ಬಂಧನ
Advertisement

ಬೆಂಗಳೂರು : ವಾಲ್ಮೀಕಿ ನಿಗಮದ ಕೋಟಿ ಕೋಟಿ ಹಣ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 12 ಜನರನ್ನು ಬಂಧಿಸಲಾಗಿದೆ. ಎಸ್‌ಐಟಿಯಿಂದ 11 ಹಾಗೂ ಇಡಿಯಿಂದ ಒಬ್ಬನ ಬಂಧನ ಮಾಡಲಾಗಿದೆ. ಪ್ರಕರಣದಲ್ಲಿ ಬಂಧನ ಆಗಿರೋರು ಯಾರ‍್ಯಾರು..? 1. ಸತ್ಯನಾರಾಯಣ, ಹಿಟ್ಲಾರಿ FFCCSL ಅಧ್ಯಕ್ಷ 2. ಸತ್ಯನಾರಾಯಣ ವರ್ಮಾ - ಹೈದರಬಾದ್ ಫಸ್ಟ್ ಬ್ಯಾಂಕ್ ಎಂಡಿ 3. ಚಂದ್ರಮೋಹನ್ - ಮದ್ಯವರ್ತಿ ಜಗದೀಶ್ ಸಹಚರ 4.ಪಿಟ್ಟಲ ಶ್ರೀನಿವಾಸ್ - ಮದ್ಯವರ್ತಿ 5. ಜಗದೀಶ್ - ಯುನಿಯನ್ ಬ್ಯಾಂಕ್ ನಲ್ಲಿ ಖಾತೆ ಮಾಡಿಸಿದ್ದ ಮಧ್ಯವರ್ತಿ 6. ಜೆ.ಜೆ.ಪದ್ಮನಾಭ್‌ - ವಾಲ್ಮೀಕಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) 7. ಪರಶುರಾಮ ದುರುಗಣ್ಣವರ - ನಿಗಮದ ಹಿಂದಿನ ಲೆಕ್ಕಾಧಿಕಾರಿ 8. ನೆಕ್ಕಂಟಿ ನಾಗರಾಜ್‌ - ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ 9. ನಾಗೇಶ್ವರ ರಾವ್‌ - ಮಾಜಿ ಸಚಿವ ನಾಗೇಂದ್ರ ಸಂಬಂಧಿ 10. ಸಾಯಿ ತೇಜ, ರಾಮ್ ಕಾರ್ತಿಕ್ ಕಂಪನಿ ಎಂ ಡಿ. ಸತ್ಯನಾರಾಯಣ ವರ್ಮಾ ಸಹಚರ 11. ತೇಜ ತಮ್ಮಯ್ಯ @ ಶಿವಕುಮಾರ್ - ನಕಲಿ ಹುದ್ದೆ ಹೊಂದಿದ್ದವನು. ನಿಗಮಕ್ಕೆ ಶಿವಕುಮಾರ್ ಹೆಸ್ರಲ್ಲಿ ಬಂದು ವ್ಯವಹಾರ ಮಾಡಿದ್ದ 12. ಹರೀಶ್, ಮಾಜಿ ಮಂತ್ರಿ ನಾಗೇಂದ್ರ ಪಿಎ ಇಡಿಯಿಂದ ಬಂಧನವಾಗಿದೆ. ಹೈದರಾಬಾದ್‌ನಲ್ಲಿ ಐವರನ್ನ ಎಸ್‌ಐಟಿ ತಂಡ ಬಂಧಿಸಿತ್ತು. ಇಂದು ಹರೀಶ್‌ನನ್ನ ಇಡಿ ಬಂಧಿಸಿದೆ. ಎಸ್ಐಟಿಯಿಂದ ಇದುವರೆಗೂ ಒಟ್ಟು ₹35 ಕೋಟಿಗೂ ಹೆಚ್ಚು ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬ್ಯಾಂಕ್‌ಗಳಲ್ಲಿದ್ದ ಹಣ ಜಪ್ತಿ ಮಾಡಲಾಗಿದೆ.

Author Image

Advertisement