For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ಮಾರ್ಚ್ 10ರಂದು ಬೆಳಿಗ್ಗೆ 6 ಗಂಟೆಯಿಂದಲೇ ಮೆಟ್ರೋ ಸೇವೆ ಆರಂಭ

05:15 PM Mar 09, 2024 IST | Bcsuddi
ಬೆಂಗಳೂರು  ಮಾರ್ಚ್ 10ರಂದು ಬೆಳಿಗ್ಗೆ 6 ಗಂಟೆಯಿಂದಲೇ ಮೆಟ್ರೋ ಸೇವೆ ಆರಂಭ
Advertisement

ಬೆಂಗಳೂರು: ಪ್ರತಿ ಭಾನುವಾರ ನಮ್ಮ ಮೆಟ್ರೋ ಸೇವೆ ಬೆಳಗ್ಗೆ 7 ಗಂಟೆಗೆ ಸಂಚಾರ ಪ್ರಾರಂಭ ಮಾಡುತ್ತಿತ್ತು. ಆದರೆ ನಾಳೆ, ಮಾರ್ಚ್ 10ರಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಲಿದೆ ಎಂದು BMRCL ತಿಳಿಸಿದೆ.

ಬೆಂಗಳೂರಿನಲ್ಲಿ ಮಾರ್ಚ್ 10, 2024ರಂದು ಕರ್ನಾಟಕ ಪೊಲೀಸ್ ವತಿಯಿಂದ ರಾಜ್ಯ ಮಟ್ಟದ 5 ಸಾವಿರ ಮತ್ತು 10 ಸಾವಿರ ಮೀಟರ್ ಮ್ಯಾರಥಾನ್ ಆಯೋಜಿಸಲಾಗಿದೆ.

ಈ ಹಿನ್ನೆಲೆ ಮ್ಯಾರಥಾನ್‌ನಲ್ಲಿ ಸಾರ್ವಜನಿಕರು ಸುಗಮವಾಗಿ ಭಾಗವಹಿಸಲು BMRCL ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಎಲ್ಲಾ ನಾಲ್ಕು ಟರ್ಮಿನಲ್‌ಗಳಿಂದ ಬೆಳಿಗ್ಗೆ 7 ಗಂಟೆ ಬದಲಾಗಿ 6 ಗಂಟೆಗೆ ಪ್ರಾರಂಭಿಸಲಿದೆ ಎಂದು BMRCL ತಿಳಿಸಿದೆ.

Advertisement

Author Image

Advertisement