ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಂಗಳೂರು-ಮಂಗಳೂರು ವಿಶೇಷ ರೈಲಿಗೆ ಗೋವಾದಿಂದ ಸಂಪರ್ಕ - ಸಂಸದ ಕೋಟ ಮನವಿಗೆ ಸ್ಪಂದನೆ

03:22 PM Jul 20, 2024 IST | Bcsuddi
Advertisement

ಕುಂದಾಪುರ: ಬೆಂಗಳೂರು - ಕುಂದಾಪುರ ನಡುವೆ ಭೂಕುಸಿತ ಹಾಗೂ ಹಲವು ವಾಹನ ಸಂಚಾರದ ರಸ್ತೆಗಳು ಬಂದ್ ಆಗಿರುವುದರಿಂದ ರಸ್ತೆ ಸಾರಿಗೆಯನ್ನೇ ನಂಬಿಕೊಂಡಿರುವ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಈ ಎರಡು ಪ್ರಮುಖ ಸ್ಥಳಗಳ ನಡುವೆ ಪ್ರಯಾಣಕ್ಕೆ ಅನುಕೂಲವಾಗುವಂತೆ ಉಡುಪಿ ಮತ್ತು ಕುಂದಾಪುರವನ್ನು ಬೆಂಗಳೂರಿಗೆ ಪಡೀಲ್ ಬೈಪಾಸ್ ಮೂಲಕ ಸಂಪರ್ಕಿಸಲು ವಿಶೇಷ ರಾತ್ರಿ ರೈಲು ಸೇವೆಯನ್ನು ಆರಂಭಿಸಬೇಕು ಎಂದು ರೈಲ್ವೇ ಇಲಾಖೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿಗೆ ಸ್ಪಂದನೆ ದೊರಕಿದೆ. ಪರಿಣಾಮವಾಗಿ ಬೆಂಗಳೂರು ಮಂಗಳೂರು ರೈಲಿಗೆ ಮಡಗಾಂವ್ ಮಂಗಳೂರು ಜಂಕ್ಷನ್ ಮದ್ಯೆ ಮೂರು ದಿನಗಳ ವಿಶೇಷ ಲಿಂಕ್ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಈ ರೈಲುಗಳಿಗೆ ಗೋವಾದಿಂದ ಕುಂದಾಪುರ ಮಾರ್ಗವಾಗಿ ಸಂಪರ್ಕ ರೈಲು ಸೇವೆ ಆರಂಭಿಸಲು ರೈಲ್ವೇ ಇಲಾಖೆ ಅಸ್ತು ಎಂದಿದೆ. ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಇಂಜಿನ್ ಬದಲಾವಣೆ, ನೀರು ತುಂಬುವಿಕೆಯಂತ ವಿಳಂಭಧ ಕಾರಣದಿಂದ ಪ್ರತ್ಯೇಕ ಲಿಂಕ್ ರೈಲಿಗಾಗಿ ಮಾಡಲಾಗಿದ್ದ ಸಂಸದರ ಪತ್ರಕ್ಕೆ ರೈಲ್ವೇ ಸಚಿವಾಲಯ ಸ್ಪಂದಿಸಿದೆ. ಇದರಿಂದಾಗಿ ಬೆಂಗಳೂರು ಮಂಗಳೂರು ವಿಶೇಷ ರೈಲು ಬಂದ ಕೆಲವೇ ಹೊತ್ತಲ್ಲಿ ಲಿಂಕ್ ರೈಲು ಉಡುಪಿ ಕುಂದಾಪುರ ಮಾರ್ಗವಾಗಿ ಗೋವಾ ಕಡೆ ತೆರಳಲಿದೆ. ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅದ್ಯಕ್ಷ ಗಣೇಶ್ ಪುತ್ರನ್ ಸಂಸದರಿಗೆ ಸಮಸ್ಯೆಗಳ ಬಗ್ಗೆ ವಿವರಿಸಿದ್ದು, ತಕ್ಷಣವೇ ಪ್ರತಿಕ್ರಿಯಿಸಿದ ಸಂಸದರು ರೈಲ್ವೇ ರಾಜ್ಯ ಸಚಿವ ಸೋಮಣ್ಣನವರ ಬಳಿ ತಕ್ಷಣಕ್ಕೆ ಲಿಂಕ್ ಸೇವೆಗಳ ಆರಂಭಕ್ಕೆ ತಿಳಿಸಿದರಲ್ಲದೇ, ಮಳೆಗಾಲದ ಸಮಸ್ಯೆ ಜಾಸ್ತಿ ಇರುವ ಅವದಿಯಲ್ಲಿ ಬೆಂಗಳೂರು ಕಾರವಾರ ಮದ್ಯೆ ಪಡೀಲ್ ಬೈಪಾಸ್ ಮಾರ್ಗದ ವಿಶೇಷ ರೈಲಿಗೆ ಬೇಡಿಕೆ ಇಟ್ಟಿದ್ದರು. ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಹೋರಾಟಕ್ಕೆ ಪ್ರಯಾಣಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Advertisement

Advertisement
Next Article