ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್

03:54 PM Nov 05, 2023 IST | Bcsuddi
Advertisement

ಬೆಂಗಳೂರು-ದೀಪಾವಳಿ ಹಬ್ಬದ ಅಂಗವಾಗಿ KSRTC ಯಿಂದ ಹೆಚ್ಚುವರಿ 2000 ಬಸ್ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಅನಕೂಲಕ್ಕಾಗಿ ಬೆಂಗಳೂರಿನಿಂದ ಎಲ್ಲಾ ಜಿಲ್ಲೆಗಳಿಗೂ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 10ರಿಂದ ಎರಡು ಸಾವಿರ ಹೆಚ್ಚುವರಿ ಬಸ್‌ಗಳ ಸಂಚರಿಸಲಿವೆ. ಕಳೆದ ವಾರ ದಸರಾ ಹಿನ್ನೆಲೆ ಹೆಚ್ಚುವರಿ ಬಸ್‌ಗಳನ್ನ ಬಿಡಲಾಗಿತ್ತು. ಅದರಿಂದ ಸಾರಿಗೆ ಇಲಾಖೆಗೆ ಕೋಟಿ ಕೋಟಿ ಆದಾಯ ಹರಿದು ಬಂದಿತ್ತು. ಇದೀಗ ಮತ್ತೆ ಹಬ್ಬಕ್ಕೆ ಹೆಚ್ಚುವರಿ ಬಸ್‌ಗಳನ್ನ ಬಿಟ್ಟು ಲಾಭ ಪಡೆಯೋಕೆ ಸಾರಿಗೆ ಇಲಾಖೆ ಮುಂದಾಗಿದೆ. ಹೆಚ್ಚುವರಿ ಬಸ್ ಬಿಡೋದಾಗಿ ಸಾರಿಗೆ ನಿಗಮವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. 12.11.2023 ರಂದು ನರಕ ಚತುರ್ದಶಿ ಹಾಗೂ ದಿನಾಂಕ: 14.11.2023 ರಂದು ಬಲಿಪಾಡ್ಯಮಿ ಹಬ್ಬ ಇದೆ.ಹೀಗಾಗಿ ಎಡದು ದಿನ ಮುಂಚೆನೇ ಪ್ರಯಾಣಿಕರು ಊರುಗಳಿಗೆ ತೆರಳುತ್ತಾರೆ.ಇದೆ 10ನೇ ತಾರೀಕಿನಿಂದ ಬಸ್ ಗಳು ಬಿಡಲಾಗುತ್ತೆ.ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ: 14.11.2023 ಹಾಗೂ 15.11.2023 ರಂದು ವಿಶೇಷ ವಾಹನಗಳನ್ನು ಬಿಡಲಾಗುತ್ತೆ. ಮುಂಗಡ ಟಿಕೆಟ್ ಬುಕಿಂಗ್ ವ್ಯವಸ್ಥೆ ಕೂಡ ಮಾಡಿಕೊಡಲಾಗಿದೆ.ಮುಂಗಡ ಟಿಕೆಟ್ ಬುಕಿಂಗ್ ಮಾಡೋರಿಗೆ ರಿಯಾಯಿತಿ ಕೊಡಲಾಗುತ್ತೆ.ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು.ಹೋಗುವ & ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು.ದಸರಾದಂತೆ ದೀಪಾವಳಿಯಲ್ಲೂ ಸಾರಿಗೆ ಇಲಾಖೆ ಲಾಭ ಪಡೆಯೋಕೆ ಮುಂದಾಗಿದೆ.

Advertisement

Advertisement
Next Article