ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಂಗಳೂರು: ಕೆಐಎ ಏರ್‌ ಟ್ರಾಫಿಕ್ ಕಂಟ್ರೋಲ್ ನವೀನ ತಂತ್ರಜ್ಞಾನದೊಂದಿಗೆ ಆಧುನೀಕರಣ

02:02 PM Jul 04, 2024 IST | Bcsuddi
Advertisement

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಏರ್ ಟ್ರಾಫಿಕ್ ಕಂಟ್ರೋಲ್ (ATC)ಯನ್ನು ನವೀಕರಣ ಮಾಡಲಾಗುತ್ತಿದೆ. ಭವಿಷ್ಯದಲ್ಲಿನ ಏರ್ ಟ್ರಾಫಿಕ್ ಬೆಳವಣಿಗೆಯ ದೃಷ್ಟಿಯಲ್ಲಿಟ್ಟುಕೊಂಡು ನವೀನ ತಂತ್ರಜ್ಞಾನದೊಂದಿಗೆ ಆಧುನೀಕರಣ ಮಾಡಲಾಗುತ್ತಿದೆ. ಕಳೆದ 16 ವರ್ಷಗಳಿಂದ ಏರ್ ಟ್ರಾಫಿಕ್ ಕಂಟ್ರೋಲ್ ಕಾರ್ಯನಿರ್ವಹಿಸುತ್ತಿದ್ದು, ಭವಿಷ್ಯದಲ್ಲಿನ ವಿಮಾನಯಾನ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ನವೀಕರಣ ಮಾಡಲಾಗುತ್ತಿದೆ, 2008 ಮೇ24 ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟದೊಂದಿಗೆ ಏರ್ ಟ್ರಾಫಿಕ್ ಕಂಟ್ರೋಲ್ ಸೇವೆಯನ್ನ ಆರಂಭಿಸಿತು. ಇದರ ನಿರ್ವಹಣೆಯನ್ನ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಮಾಡುತ್ತಿದೆ. ಟರ್ಮಿನಲ್ 1ರ ಬಳಿ ಇರುವ ಏರ್ ಟ್ರಾಫಿಕ್ ಕಂಟ್ರೋಲ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 720ರಿಂದ 730 ಏರ್ ಟ್ರಾಫಿಕ್ ಚಾಲನೆಯನ್ನ ನಿರ್ವಹಿಸುತ್ತಿದೆ. ಭವಿಷ್ಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಹೆಚ್ಚಾಗಲಿದೆ. ಮುಂದಿನ ದಿನಗಳ ಬೇಡಿಕೆಯನ್ನ ಪೂರೈಸಲು ಈಗನಿಂದಲೇ ಸಿದ್ಧತೆಯನ್ನ ಮಾಡಿಕೊಳ್ಳಲಾಗುತ್ತಿದೆ. ಏರ್ ಪೋರ್ಟ್ ವಕ್ತಾರರ ಪ್ರಕಾರ, ವಿಮಾನ ನಿಲ್ದಾಣದ ಬಳಿ ಮತ್ತೊಂದು ATC ಗೋಪುರ ನಿರ್ಮಾಣ ಮಾಡಲಾಗುವುದು. ಪ್ರಸ್ತುತ ATCಯಲ್ಲಿ ನಡೆಯುತ್ತಿರುವ ಕಾರ್ಯಚರಣೆಯನ್ನ ಅಲ್ಲಿಗೆ ಸ್ಥಳಾಂತರಿಸಲಾಗುವುದು, ಒಮ್ಮೆ ಹೊಸ ಟವರ್‌ಗೆ ಸ್ಥಳಾಂತರಗೊಂಡರೆ ಪ್ರಸ್ತುತ ATCಯನ್ನ ಸಂಪೂರ್ಣವಾಗಿ ನವೀಕರಿಸಲಾಗುವುದು. ನವೀಕರಣ ಮತ್ತು ಮೇಲ್ದರ್ಜೆಗೆರಿಸುವ ಪ್ರಕ್ರಿಯೆಗೆ ಸುಮಾರು ಅಂದಾಜು 200 ಕೋಟಿ ವೆಚ್ಚವಾಗಲಿದೆ. ಇದರ ಕಾಮಾಗಾರಿ 6 ತಿಂಗಳಿಂದ 1 ವರ್ಷದವರೆಗೂ ನಡೆಯುವ ಸಾಧ್ಯತೆ ಇರುವುದ್ದಾಗಿ ತಿಳಿದು ಬಂದಿದೆ. ಪ್ರಸ್ತುತ ಇರುವ ATC ಉತ್ತಮ ಸ್ಥಿತಿಯಲ್ಲಿದ್ದು ಇನ್ನೂ 10 ರಿಂದ 12 ವರ್ಷಗಳವರೆಗೂ ಕಾರ್ಯ ನಿರ್ವಹಿಸುವಷ್ಟು ಕ್ಷಮೆತೆಯನ್ನ ಹೊಂದಿದೆ.

Advertisement

Advertisement
Next Article