For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: 'ಅಶ್ವಮೇಧ ಕ್ಲಾಸಿಕ್ʼ ಬಸ್ ಗಳಿಗೆ ಸಿಎಂ ಚಾಲನೆ

01:59 PM Feb 05, 2024 IST | Bcsuddi
ಬೆಂಗಳೂರು   ಅಶ್ವಮೇಧ ಕ್ಲಾಸಿಕ್ʼ ಬಸ್ ಗಳಿಗೆ ಸಿಎಂ ಚಾಲನೆ
Advertisement

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯದ ಶಕ್ತಿ ಯೋಜನೆ ಅನುಷ್ಠಾನಗೊಳಿಸಿದ ಬಳಿಕ ರಾಜ್ಯದೆಲ್ಲೆಡೆ ಬಸ್ ಗಳ ಅಭಾವ ತೀವ್ರಗೊಂಡಿತ್ತು. ದಿನೇ ದಿನೇ ಏರುತ್ತಿದ್ದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಗಳನ್ನು ಓಡಿಸಲಾಗದೇ ಸರ್ಕಾರ ಕೈ ಕೈ ಹಿಸುಕಿಕೊಳ್ಳುವಂತಾಗಿತ್ತು.

ಈ ಪರಿಸ್ಥಿತಿಯಿಂದ ಹೊರ ಬರಲು 1000 ನೂತನ ಬಸ್ ಗಳ ಖರೀದಿಗೆ ಮುಂದಾಗಬೇಕಾಯಿತು. ಈ ಹಿನ್ನೆಲೆಯಲ್ಲಿ ಇದೀಗ ಮೊದಲ ಹಂತದಲ್ಲಿ "ಅಶ್ವಮೇಧ ಕ್ಲಾಸಿಕ್" ಎಂಬ ಹೆಸರಿನ 100 ಬಸ್ ಗಳು ಇಂದಿನಿಂದಲೇ ರೋಡಿಗಿಳಿಯಲಿವೆ. ನೂತನ ಅಶ್ವಮೇಧ ಬಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಏರ್ಪಡಿಸಲಾಗಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಇಲಾಖೆಯ ಮತ್ತಿತರ ಅಧಿಕಾರಿಗಳು ಹಾಜರಿದ್ದರು. 'ಅಶ್ವಮೇಧ' ಗಳಲ್ಲೂ ಮಹಿಳೆಯರಿಗೆ ಉಚಿತ ನೂತನ ನೂರು ಅಶ್ವಮೇಧ ಕ್ಲಾಸಿಕ್ ಬಸ್ ಗಳಲ್ಲೂ ರಾಜ್ಯದ ಶಕ್ತಿ ಯೋಜನೆ ಅಡಿಯಲ್ಲಿ ಬರುವ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ಗ್ಯಾರಂಟಿ. ಈ ಬಗ್ಗೆ ಸಿಎಂ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

Advertisement
Author Image

Advertisement