ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಂಗಳೂರಿನಲ್ಲಿ ಚಿರತೆ ಸಾವು ಪ್ರಕರಣ - ಅರಣ್ಯ ಇಲಾಖೆ ವಿರುದ್ದ ಸಾರ್ವಜನಿಕರಿಂದ ಆಕ್ರೋಶ

02:08 PM Nov 02, 2023 IST | Bcsuddi
Advertisement

ಬೆಂಗಳೂರು: ಬೆಂಗಳೂರಿನ ಬೊಮ್ಮನ ಹಳ್ಳಿ ಕೈಗಾರಿಕಾ ಪ್ರದೇಶದ ಕೂಡ್ಲುಗೇಟ್ ನ ಕೃಷ್ಣರೆಡ್ಡಿ ಪಾಳ್ಯದ ಪಾಳುಬಿದ್ದ ಕಟ್ಟಡದಲ್ಲಿ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದು, ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾರಿಸಿದ ಬ್ಯಾರಲ್ ಗನ್ ನಿಂದ ಚಿರತೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಚಿರತೆಯ ಸಾವು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆಯಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಕಾರ್ಯಾಚರಣೆ ಸಂದರ್ಭ ಭಯ ಬಿದ್ದ ಚಿರತೆ ಬಲೆಯ ಕಡೆ ಓಡಿ ಬಂದಿತ್ತು. ಚಿರತೆ ಬಲೆಗೆ ಬಿದ್ದಾಗ ವೈದ್ಯರು ಅರವಳಿಕೆ ನೀಡಬಹುದಿತ್ತು. ಆದರೆ ಬಲೆಗೆ ಬಿದ್ದ ಬಳಿಕ ಚಿರತೆಯ ಬೆನ್ನಿನ ಮೇಲೆ ಫೈರಿಂಗ್​ ಮಾಡಿದ್ದರಿಂದ ಬೆನ್ನಿಂದ ಹೊಕ್ಕ ಗುಂಡು ಎದೆಗೆ ನುಗ್ಗಿದೆ. ಇದರ ಪರಿಣಾಮ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ.

ಚಿರತೆಯನ್ನು ಕೊಲ್ಲಲು ಇಷ್ಟೊಂದು ಕಾರ್ಯತಂತ್ರ ರೂಪಿಸಿದ್ದು ಯಾಕೆ...? ಎನ್ನುವ ಪ್ರಶ್ನೆ ಉದ್ಭವವಾಗಿದ್ದು. ಮೊದಲನೇ ಬಾರಿ ಅಟ್ಯಾಕ್ ಮಾಡಿದಾಗ ನುರಿತ ತಜ್ಞರನ್ನು ಕೂಡಲೇ ಸ್ಥಳಕ್ಕೆ ಕರೆಸಬಹುದಿತ್ತು. ಮೊದಲೇ ಫೆಲ್ಯೂರ್ ಆಗಿದ್ದ ತಂಡವನ್ನೇ ಮತ್ತೆ ಅರವಳಿಕೆ ನೀಡಲು ಮುಂದೆ ಬಿಡಲಾಗಿತ್ತು. ಅರಣ್ಯ ಇಲಾಖೆಯ ಚಿರತೆ ಕಾರ್ಯಾಚರಣೆ ವಿರುದ್ಧ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Next Article