ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಂಗಳೂರಿಗೆ ಸಪ್ಲೈ ಆಗ್ತಿದ್ಯಾ ಕುರಿ ಮಾಂಸ ಎಂದು ನಾಯಿ ಮಾಂಸ..!ನೀವು ತಿನ್ನೋ ಮಾಂಸ ಯಾವುದು..?

09:50 AM Jul 27, 2024 IST | Bcsuddi
Advertisement

ಬೆಂಗಳೂರು ನಗರದ ರೈಲ್ವೆ ನಿಲ್ದಾಣದಲ್ಲಿ ಮಾಂಸದ ಜಟಾಪಟಿ ನಡೆದಿದೆ. ಒಂದು ಗುಂಪು ಜೈಪುರದಿಂದ ಬಂದ ಮಾಂಸದಲ್ಲಿ ನಾಯಿ ಮಾಂಸ ಇದೆ ಅಂತ ಆರೋಪಿಸಿದ್ರೆ ಮತ್ತೊಂದು ಗುಂಪು ಇದೆಲ್ಲ ಕುರಿ ಮಾಂಸ ಎಂದೇ ಸಮರ್ಥಿಸಿಕೊಂಡಿದೆ.

Advertisement

ಶುಕ್ರವಾರ ಸಂಜೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಜೈಪುರದಿಂದ ಈ ಮಾಂಸದ ಬಾಕ್ಸ್ ಗಳು ಬಂದಿದ್ವು. ಆದ್ರೆ ಈ ಬಾಕ್ಸ್ ಗಳು ಎರಡು ಗುಂಪುಗಳ ಗಲಾಟೆ ಮಧ್ಯೆ ಸಿಲುಕಿಕೊಂಡಿದ್ವು. ಇದಕ್ಕೆ ಕಾರಣ ಈ ಬಾಕ್ಸ್ ನಲ್ಲಿದ್ದ ಉದ್ದ ಬಾಲದ ಮಾಂಸ. ಜೈಪುರದಿಂದ ಬಂದ ಸುಮಾರು 50 ಕ್ಕೂ ಹೆಚ್ಚು ಬಾಕ್ಸ್ ಗಳಲ್ಲಿ 4,500 ಕೆಜಿ ಮಾಂಸ ಇತ್ತು. ಆದರೆ ಈ ಮಾಂಸದ ಬಾಕ್ಸ್ ಗಳಲ್ಲಿ ಕುರಿಯ ಮಾಂಸದ ಜೊತೆ ನಾಯಿ ಮಾಂಸವನ್ನ ಮಿಕ್ಸ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂತು. ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು ರೈಲಿನಿಂದ ಈ ಬಾಕ್ಸ್ ಗಳು ಹೊರಗೆ ಬರ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲೇ ತಡೆದ್ರು . ಬಳಿಕ ಈ ಬಾಕ್ಸ್ ಗಳಲ್ಲಿ ನಾಯಿ ಮಾಂಸ ಮಿಕ್ಸ್ ಆಗಿದೆ. ಸ್ವಚ್ಚತೆ ಇಲ್ಲ ಅಕ್ರಮವಾಗಿ ಸಾಗಟ ಮಾಡಲಾಗ್ತಿದೆ ಎಂದು ಆರೋಪಿಸಿದ್ರು. ಇನ್ನು ಈ ಮಾಂಸದ ಬಾಕ್ಸ್ ಗಳ ಮಾಲೀಕ ಎಂದು ಹೇಳಿಕೊಂಡಿರೋ ಅಬ್ದುಲ್ ರಜಾಕ್ ಎನ್ನುವರು, ಈ ಆರೋಪವನ್ನ ನಿರಾಕರಿಸಿದ್ದಾರೆ. ಪುನೀತ್ ಕೆರೆಹಳ್ಳಿ ರೋಲ್ ಕಾಲ್ ಮಾಡ್ತಿದ್ದು, ಅದನ್ ಕೊಡಲಿಲ್ಲ ಅಂತ ಈ ಆರೋಪ ಮಾಡ್ತಿದ್ದಾರೆ ಎಂದ್ರು. ಅಷ್ಟಲ್ಲದೇ ಈ ಮಾಂಸದ ಸಾಗಾಟಕ್ಕೆ ಪರ್ಮಿಷನ್ ಕೂಡ ಇದೆ ಅಂತ ಸಮರ್ಥಿಸಿಕೊಂಡ್ರು.

ಈ ಮಧ್ಯೆ ಸ್ಥಳಕ್ಕೆ ಬಂದ ಬಿವಿಎಂಪಿ ಫುಡ್ ಆಫೀಸರ್ ಮತ್ತು ಆಹಾರ ಗುಟಮಟ್ಟ ಅಧಿಕಾರಿಗಳು ಬಾಕ್ಸ್ ಗಳನ್ನ ಪರಿಶೀಲನೆ ಮಾಡಿದ್ರು. ಬಳಿಕ ಸ್ವಲ್ಪ ಮಾಂಸವನ್ನ ಸ್ಯಾಂಪಲ್ ಟೆಸ್ಟ್ ಕಳಿಸಿ, ರಿಸಲ್ಟ್ ಬಂದ ಮೇಲೆ ಕ್ರಮ ತೆಗೆದುಕೊಳ್ತೀವಿ ಅಂದ್ರು. ಆದ್ರೆ ಸತ್ಯ ಏನಂದ್ರೆ ನಗರದ ಬಹುತೇಕ ಹೋಟೆಲ್ ಗೆ ಸಪ್ಲೈ ಆಗೋ ಈ ಮಾಂಸ ಫ್ರೆಶ್ ಅಂತೂ ಅಲ್ಲ. ಜೈಪುರದಿಂದ ರೈಲಿನಲ್ಲಿ ಮಾಂಸ ಬೆಂಗಳೂರಿಗೆ ಬರಲು ಮೂರ್ನಾಲ್ಕು ದಿನ ಬೇಕು. ಮತ್ತೆ ಇಲ್ಲಿಂದ ಮಾಂಸ ಹೋಟೆಲ್ ಗೆ ಸಪ್ಲೈ ಆಗಲು ಕನಿಷ್ಠ ಒಂದು ದಿನ ಆಗುತ್ತದೆ. ಇನ್ನೂ ನಾವು ತಿನ್ನೋ ಅಷ್ಟರಲ್ಲ ಆ ಮಾಂಸದ ಕತೆ ಏನ್ ಆಗಿರುತ್ತೆ ಅಂತ ಯೋಚಿಸಿ. ಇನ್ನೂ ಮಾಂಸದ ಬಾಕ್ಸ್ ಗಳನ್ನ ಕಾಟನ್ ಪೇಟೆ ಪೊಲೀಸರು ಸೀಜ್ ಮಾಡಿದ್ದಾರೆ. ಹಾಗೆ ಆಹಾರ ಇಲಾಖೆ ಅಧಿಕಾರಿಗಳು ಮಾಂಸವನ್ನ ಪರಿಶೀಲನೆ ಮಾಡಲಿದ್ದು, ಮಾಲೀಕ ರಜಾಕ್ ರನ್ನ ವಿಚಾರಣೆ ಮಾಡಲಿದ್ದಾರೆ.

Advertisement
Next Article