ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬುಲ್ಡೋಜರ್‌ ಕಾರ್ಯಾಚರಣೆಗೆ ಬ್ರೇಕ್‌ ಹಾಕಿದ ಸುಪ್ರೀಂ ಕೋರ್ಟ್‌

06:18 PM Sep 17, 2024 IST | BC Suddi
Advertisement

ನವದೆಹಲಿ: ದೇಶದ ಯಾವುದೇ ಭಾಗದಲ್ಲಿಯೂ ಅಕ್ಟೋಬರ್‌ 1 ರ ವರೆಗೆ ಬುಲ್ಡೋಜರ್‌ ಕಾರ್ಯಾಚರಣೆಯನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಇಂದು (ಸೆ.17) ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.

Advertisement

“ಬುಲ್ಟೋಜರ್ ಕಾರ್ಯಾಚರಣೆ ನಡೆಸಬಾರದು” ಎಂಬ ಆದೇಶಕ್ಕೆ ಪ್ರತಿರೋಧ ತೋರಿದ ಸಾಲಿಟರ್ ಜನರಲ್ ತು಼ಷಾರ್ ಮೆಹ್ತಾ ಅವರು “ಇದರಿಂದಾಗಿ ಬುಲ್ಡೋಜರ್ ಕಾರ್ಯಾಚರಣೆಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ” ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದರು.
ಅದಕ್ಕೆ ಸುಪ್ರೀಂ ಪೀಠದ ಜಸ್ಟೀಸ್ ಬಿಆರ್‌ ಗವಾಯಿ ಮತ್ತು ಜಸ್ಟೀಸ್ ಕೆವಿ ವಿಶ್ವನಾಥ್ “ಮುಂದಿನ ವಿಚಾರಣೆವರೆಗೆ (ಅ.1) ಕಾರ್ಯಾಚರಣೆ ಸ್ಥಗಿತಗೊಂಡರೆ ಆಕಾಶ ಕಳಚಿ ಬಿಳುವುದಿಲ್ಲ” ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಹೋದ ವರ್ಷ ನಡೆದ ವಿಚಾರಣೆಯಲ್ಲೂ ಬುಲ್ಡೋಜರ್ ಕಾರ್ಯಾಚರಣೆಯ ವಿರುದ್ದ ಸುಪ್ರೀಂ ಕೋರ್ಟ್ ನಿಗಾವಹಿಸಿತ್ತು. ಮುಂದಿನ ವಿಚಾರಣೆವರೆಗೆ ಸುಪ್ರೀಂ ಕೋರ್ಟ್ ಆಜ್ಞೆ ಇಲ್ಲದೆ ಬುಲ್ಡೋಜರ್‌ ಕಾರ್ಯಚರಣೆ ನಡೆಸುವಂತಿಲ್ಲ ಎಂಬುವುದಾಗಿ ತಿಳಿಸಿದ್ದಾರೆ.
ಕ್ರಿಮಿನಲ್ ಪ್ರಕರಣ ಹಿನ್ನಲೆಯಲ್ಲಿ ಆರೋಪಿಯ ಸಂಪತ್ತಿನ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿದ ಪ್ರಕರಣದ ಕುರಿತ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

Advertisement
Next Article