ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಿ.ಇಡಿ ಪ್ರವೇಶಕ್ಕೆ  ದಾಖಲಾತಿ ಘಟಕದಿಂದ ಪಟ್ಟಿ ಬಿಡುಗಡೆ. ವೆಬ್ ನಲ್ಲಿ ಚೆಕ್ ಮಾಡಿ

08:03 AM Dec 29, 2023 IST | Bcsuddi
Advertisement

 

Advertisement

ದಾವಣಗೆರೆ, : ಪ್ರಸಕ್ತ ಸಾಲಿನಲ್ಲಿ 2 ವರ್ಷದ ಬಿ.ಇಡಿ ಕೋರ್ಸ್‍ಗೆ ಸರ್ಕಾರಿ ಕೋಟಾದ ಆಯ್ಕೆಯಾದವರ ಪಟ್ಟಿಯನ್ನು ವೆಬ್‍ಸೈಟ್  http://Schooleducation.karnataka.gov.in    ಪ್ರಕಟಿಸಲಾಗಿದೆ.

ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಚಲನ್ ಡೌನ್‍ಲೋಡ್ ಮಾಡಿಕೊಂಡು ದಾಖಲಾತಿ ಶುಲ್ಕವನ್ನು ಎಸ್‍ಬಿಐ ಬ್ಯಾಂಕಿನಲ್ಲಿ ಪಾವತಿಸಿ ಡಿಸೆಂಬರ್ 30 ರಿಂದ ಜನವರಿ 3 ರೊಳಗಾಗಿ ಚಲನ್‍ನನ್ನು ದಾವಣಗೆರೆ ಡಯಟ್ ಕಚೇರಿಗೆ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪತ್ರವನ್ನು ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಡಯಟ್ ಹಿರಿಯ ಉಪನ್ಯಾಸಕರಾದ ಮಹಮ್ಮದ್ ಅಯೂಬ್ ಸೊರಬ್ ಮೊ.ಸಂ: 9164489972, ಕಚೇರಿ ದೂ.ಸಂ: 08192-231156 ನ್ನು ಸಂಪರ್ಕಿಸಲು ಡಯಟ್ ಪ್ರಾಚಾರ್ಯರರು ಹಾಗೂ ಪದನಿಮಿತ್ತ ಉಪ ನಿರ್ದೇಶಕರಾದ ಗೀತಾ ತಿಳಿಸಿದ್ದಾರೆ.

Advertisement
Next Article