ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಿಹಾರದಲ್ಲಿ ರಾಹುಲ್‌ ಪ್ರಚಾರದ ವೇಳೆ ಕುಸಿದ ವೇದಿಕೆ

09:51 AM May 28, 2024 IST | Bcsuddi
Advertisement

ಪಾಟ್ನಾ: ಬಿಹಾರದಲ್ಲಿ ರಾಹುಲ್‌ ಗಾಂಧಿ ಪ್ರಚಾರ ಮಾಡಲು ಮುಂದಾದಾಗ ವೇದಿಕೆಯ ಒಂದು ಭಾಗ ಕುಸಿದ ಘಟನೆ ನಡೆದಿದೆ.

Advertisement

ಇಂದು ಬಿಹಾರ ಮಾಜಿ ಸಿಎಂ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಅವರ ಪರವಾಗಿ ಪ್ರಚಾರ ಮಾಡಲು ಗಾಂಧಿ ಅವರು ಪಾಟ್ನಾ ಹೊರವಲಯದಲ್ಲಿರುವ ಪಾಲಿಗಂಜ್‌ಗೆ ಆಗಮಿಸಿದ್ದರು.

ಮಿಸಾ ಭಾರತಿ ಅವರ ಕೈಯನ್ನು ಹಿಡಿದು ಮೇಲಕ್ಕೆ ಎತ್ತಲು ಮುಂದಾದಾಗ ವೇದಿಕೆ ಒಂದು ಭಾಗ ಕುಸಿದಿದೆ. ಈ ವೇಳೆ ಸಮತೋಲನ ಸಾಧಿಸಿದ ರಾಹುಲ್‌ ಗಾಂಧಿ ನಗುತ್ತಾ ಅಭಿಮಾನಿಗಳ ಮುಂದೆ ಕೈಯನ್ನು ಬೀಸತೊಡಗಿದರು. ನಂತರ ಭದ್ರತಾ ಸಿಬ್ಬಂದಿ ಸಹಾಯದಿಂದ ರಾಹುಲ್‌ ಮತ್ತು ಅತಿಥಿಗಳು ನಿಧಾನವಾಗಿ ಹೆಜ್ಜೆ ಹಾಕಿ ಪಾರಾದರು.

ಮಿಸಾ ಭಾರತಿ ಪಾಟಲಿಪುತ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಜೂನ್‌ 1 ರಂದು ಮತದಾನ ನಡೆಯಲಿದೆ.

 

Advertisement
Next Article