ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಿಸಿಬಿಸಿ ಎಲೆಕೋಸು ಪಕೋಡ ಮಾಡಿ ಸವಿಯಿರಿ

09:19 AM May 31, 2024 IST | Bcsuddi
Advertisement

ಕಾಫಿ ಜೊತೆ ರುಚಿರುಚಿಯಾಗಿ ಏನನ್ನಾದರೂ ಸವಿಯಬೇಕು ಎನ್ನುವ ಬಯಕೆ ಎಲ್ಲರದ್ದು. ಬಿಸ್ಕೆಟ್, ಕರುಂ ಕುರುಂ ತಿಂಡಿ ಬದಿಗಿಟ್ಟು ಈ ಬಾರಿ ಸ್ಪೆಷಲ್ಲಾಗಿ ಕ್ಯಾಬೇಜ್ ಪಕೋಡ ತಯಾರಿಸಿ ಸವಿಯಿರಿ. ಇದನ್ನು ತಯಾರಿಸುವ ವಿಧಾನ ಕೂಡ ಸುಲಭ. ಇಲ್ಲಿದೆ ಇದರ ವಿವರಣೆ. ಬೇಕಾಗುವ ಸಾಮಾಗ್ರಿಗಳು ಎಲೆಕೋಸು – 1/2 ಈರುಳ್ಳಿ – 1 ಕಡಲೆ ಹಿಟ್ಟು – 2 ಕಪ್ ಅಕ್ಕಿ ಹಿಟ್ಟು – 1 ಕಪ್ ಪುದೀನಾ ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಹಸಿಮೆಣಸಿನಕಾಯಿ 4-5 ಉಪ್ಪು ರುಚಿಗೆ ತಕ್ಕಷ್ಟು ಎಣ್ಣೆ ಕರಿಯಲು  ಮಾಡುವ ವಿಧಾನ

Advertisement

ಎಲೆಕೋಸು ಮತ್ತು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಒಂದು ಪಾತ್ರೆಗೆ ಹಾಕಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕೋಸಿಗೆ ಹಿಡಿಯುವಷ್ಟು ಕಡಲೆಹಿಟ್ಟು, ಸ್ವಲ್ಪ ಅಕ್ಕಿ ಹಿಟ್ಟು, ಹೆಚ್ಚಿದ ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರೆದರೆ ಕ್ಯಾಬೇಜ್ ಪಕೋಡ ಸಿದ್ಧವಾಗುತ್ತದೆ.

Advertisement
Next Article