ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

 ಬಿಟ್ ಕಾಯಿನ್ ಹಗರಣ : ಎಸ್ ಐಟಿ ವಿಚಾರಣೆಗೆ ಹಾಜರಾದ ನಲಪಾಡ್

06:20 PM Jun 12, 2024 IST | Bcsuddi
Advertisement

ಬೆಂಗಳೂರು : ಬಿಟ್ ಕಾಯಿನ್ ಹಗರಣದಲ್ಲಿ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಕೆಪಿಸಿಸಿ ಯುವ ರಾಜ್ಯಧ್ಯಕ್ಷ ನಲಪಾಡ್ ಎಸ್ ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಶ್ರೀಕಿ ಆಪ್ತನಾಗಿದ್ದ ನಲಪಾಡ್ ಹೆಸ್ರು ಈ ಹಿಂದೆ ಕೂಡ ಬಿಟ್ ಕಾಯಿನ್ ಕೇಸ್ ನಲ್ಲಿ ಕೇಳಿ ಬಂದಿತ್ತು. ಸದ್ಯ ಬಿಟ್ ಕಾಯಿನ್ ಸಂಪೂರ್ಣ ಪ್ರಕರಣಗಳನ್ನ ಎಸ್ ಐಟಿ ವಿಚಾರಣೆ ನಡೆಸುತ್ತಿದ್ದು ವಿಚಾರಣೆ ಭಾಗವಾಗಿ ನಲಪಾಡ್ ನೊಟೀಸ್ ನೀಡಿ ವಿಚಾರಣೆಗೆ ಕರೆಸಿದ್ದಾರೆ. ನೋಟಿಸ್‌ ಹಿನ್ನೆಲೆ ಇಂದು ಸಿಐಡಿ ಕಚೇರಿಯಲ್ಲಿರೋ ಎಸ್ ಐಟಿ ಅಧಿಕಾರಿಗಳ ಮುಂದೆ ನಲಪಾಡ್ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಎಸ್ ಐಟಿ ಅಧಿಕಾರಳು ಶ್ರೀಕಿ ಕುರಿತಂತೆ ನಲಪಾಡ್ ರಿಂದ ಒಂದಷ್ಟು ಮಾಹಿತಿ ಪಡೆದಿದ್ದಾರೆ. ಶ್ರೀಕಿ ಯಾವಗಿನಿಂದ ಪರಿಚಯ? ಶ್ರೀಕಿ ಮತ್ತು ನಿಮ್ಮ ಪರಿಚಯ ಕೇವಲ ಸ್ನೇಹಾನ? ಇಲ್ಲ ಏನಾದ್ರೂ ಹಣಕಾಸಿನ ವ್ಯವಹಾರ ನಡೆಸಿದ್ರಾ? ಬಿಟ್ ಕಾಯಿನ್ ಕುರಿತಂತೆ ಶ್ರೀಕಿ ನಿಮ್ಮ ಬಳಿ ವ್ಯವಹಾರ ನಡೆಸಿದ್ರಾ ಅನ್ನೋ ಬಗ್ಗೆ ಎಸ್ ಐಟಿ ನಲಪಾಡ್ ರಿಂದ ಮಾಹಿತಿ ಪಡೆದುಕೊಂಡಿದೆ.

Advertisement

Advertisement
Next Article