ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಿಟ್ ಕಾಯಿನ್ ಹಗರಣದ ಶ್ರೀಕಿ ಮತ್ತು ರಾಬಿನ್ ಮೇಲೆ ಕೋಕಾ ಕಾಯ್ದೆ..!

10:08 AM May 25, 2024 IST | Bcsuddi
Advertisement

ಬೆಂಗಳೂರು: ಬಿಟ್ ಕಾಯಿನ್ ಹಗರಣದದಲ್ಲಿ ಎಸ್ ಐಟಿ ಅಧಿಕಾರಿಗಳು ದಿಟ್ಟ ಹೆಜ್ಜೆ ಇರಿಸಿದ್ದಾರೆ. 2017ರಲ್ಲಿ ತುಮಕೂರು ಸೆನ್ ಠಾಣೆಯಲ್ಲಿ ದಾಖಲಾಗಿದ್ದ ಬಿಟ್ ಕಾಯಿನ್ ಪ್ರಕರಣದಲ್ಲಿ ಶ್ರೀಕಿ ಆ್ಯಂಡ್‌ ಟೀಮ್ ಮೇಲೆ ಕೋಕಾ(KCOCA) (Karnataka Control of Organised Crimes Act ) ಆಕ್ಟ್ ಹಾಕಿದ್ದಾರೆ. ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಕೇಸ್ ಆದರೆ ಕನಿಷ್ಠ ಒಂದು ವರ್ಷ ಅಪರಾಧಿಗಳಿಗೆ ಬೇಲ್ ಸಿಗಲ್ಲ. ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿವುವರ ವಿರುದ್ಧ ಈ ಖಾಯ್ದೆ ಜಾರಿ ಮಾಡಲಾಗುತ್ತೆ. ಪ್ರಕರಣ ಕಿಂಗ್ ಪಿನ್ ಶ್ರೀ ಕೃಷ್ಣ @ ಶ್ರೀಕಿ ಯನ್ನ ಸಿಐಡಿ ಅಧಿಕಾರಿಗಳು ಬಂಧಿಸಿದ್ದು ಶ್ರೀಕಿಯ ಕ್ರೈಮ್ ಪಾರ್ಟ್ನರ್ ರಾಬೀನ್ ಖಂಡೇವಾಲನನ್ನ ಎಸ್ ಐಟಿ ಅಧಿಕಾರಿಗಳು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಸದ್ಯ ತುಮಕೂರು ಸೆನ್ ಠಾಣೆ ಪ್ರಕರಣದಲ್ಲಿ ಮಾತ್ರ ಕೋಕಾ ಅಳವಡಿಸಿದ್ದು ಮುಂದಿನ ದಿನಗಳಲ್ಲಿ ಶ್ರೀಕಿ ಮೇಲಿರಿವ ಎಲ್ಲಾ ಪ್ರಕರಣಗಳನ್ನ ಕೋಕಾ ಅಡಿಯಲ್ಲಿ ಸೇರಿಸಲು ಎಸ್ ಐಟಿ ಚಿಂತನೆ ನಡೆಸಿದೆ. ಒಂದು ವೇಳೆ ಶ್ರೀಕಿ ಮೇಲಿನ ಎಲ್ಲಾ ಪ್ರಕರಣಗಳು ಕೋಕಾ ಅಡಿಗೆ ಸೇರಿದರೆ ರಾಜ್ಯದ ಕೆಲ ಪೊಲೀಸ್ ಅಧಿಕಾರಿಗಳಿಗು ಸಂಕಷ್ಟ ಎದುರಾಗಲಿದೆ. ಕೋಕಾ ಕಾಯ್ದೆ ಹೇಳುವಂತೆ ಆರೋಪಿಗೆ ಸಹಕಾರ ನೀಡಿದ ಮತ್ತು ಆರೋಪಿಯ ಕೃತ್ಯದಲ್ಲಿ ಕೈ ಜೊಡಿಸಿದ ವ್ಯಕ್ತಿಗಳಿಗೂ ಈ ಕಾಯ್ದೆಯಡಿ ಶಿಕ್ಷೆಯಾಗುತ್ತೆ. ಇದೇ ಕಾರಣಕ್ಕೆ ಸದ್ಯ ಆರೋಪಿಗಳಾಗಿರೋ ಪೊಲೀಸ್ ಅಧಿಕಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ.

Advertisement

Advertisement
Next Article