For the best experience, open
https://m.bcsuddi.com
on your mobile browser.
Advertisement

'ಬಿಜೆಪಿ ಶಿಕ್ಷಣ ವ್ಯವಸ್ಥೆಯನ್ನ ಮಾಫಿಯಾ, ಭ್ರಷ್ಟರಿಗೆ ವಹಿಸಿದೆ'- ಪ್ರಿಯಾಂಕಾ ಗಾಂಧಿ

02:35 PM Jun 23, 2024 IST | Bcsuddi
 ಬಿಜೆಪಿ ಶಿಕ್ಷಣ ವ್ಯವಸ್ಥೆಯನ್ನ ಮಾಫಿಯಾ  ಭ್ರಷ್ಟರಿಗೆ ವಹಿಸಿದೆ   ಪ್ರಿಯಾಂಕಾ ಗಾಂಧಿ
Advertisement

ನವದೆಹಲಿ: ಬಿಜೆಪಿಯ ಆಡಳಿತದಲ್ಲಿ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಮಾಫಿಯಾ ಮತ್ತು ಭ್ರಷ್ಟರಿಗೆ ವಹಿಸಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೀಟ್-ಯುಜಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೆ ನೀಟ್-ಪಿಜಿ, ಯುಜಿಸಿ- ನೆಟ್ ಮತ್ತು ಸಿಎಸ್‌ಐಆರ್-ನೆಟ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ದೇಶದ ಕೆಲವು ಮುಖ್ಯ ಪರೀಕ್ಷೆಗಳ ಸ್ಥಿತಿ ಇದು. ಇಡೀ ಶಿಕ್ಷಣ ವ್ಯವಸ್ಥೆಯನ್ನು ಮೋದಿ ಮಾಫಿಯಾಗೆ ಒಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೇಶದ ಶಿಕ್ಷಣ ಮತ್ತು ಮಕ್ಕಳ ಭವಿಷ್ಯವನ್ನು ದುರಂಹಕಾರಿ ಮತ್ತು ಅಸಮರ್ಥ ರಾಜಕಾರಣಿಗಳ ಕೈಗೆ ನೀಡಿರುವುದರಿಂದ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ರದ್ದು, ಕ್ಯಾಂಪಸ್‌ಗಳಿಂದ ಶಿಕ್ಷಣ ಕಣ್ಮರೆಯಾಗುತ್ತಿರುವುದಕ್ಕೆ ಕಾರಣವಾಗಿದೆ. ಇವು ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯ ಸ್ಥಿತಿಯಾಗಿದೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

Advertisement

ಇಂದು ಬಿಜೆಪಿ ಸರ್ಕಾರ ಯುವಜನರ ಭವಿಷ್ಯಕ್ಕೆ ದೊಡ್ಡ ತೊಡಕಾಗಿದೆ. ದೇಶದ ಸಮರ್ಥ ಯುವಕರು ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಹೋರಾಡಲು ತಮ್ಮ ಅಮೂಲ್ಯ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತಿದ್ದಾರೆ. ಅಸಹಾಯಕ ನರೇಂದ್ರ ಮೋದಿ ಕೇವಲ ಪ್ರೇಕ್ಷಕರಾಗಿದ್ದಾರೆ ಎಂದು ಹೇಳಿದ್ದಾರೆ.

Author Image

Advertisement