For the best experience, open
https://m.bcsuddi.com
on your mobile browser.
Advertisement

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಮ್ಮ ನಾಯಕ ಅಲ್ಲ: ರಮೇಶ ಜಾರಕಿಹೊಳಿ

08:12 AM Sep 17, 2024 IST | BC Suddi
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ನಮ್ಮ ನಾಯಕ ಅಲ್ಲ  ರಮೇಶ ಜಾರಕಿಹೊಳಿ
Advertisement

ಬೆಳಗಾವಿ ಜಿಲ್ಲೆ: ಪಕ್ಷದಲ್ಲಿಕಿರಿಯರಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಎಂದಿಗೂ ನಮ್ಮ ನಾಯಕ ಅಂತ  ಒಪ್ಪುವುದಿಲ್ಲ ಅವರಿಗೆ ಯಾವುದೇ ಸಿದ್ಧಾಂತ ಇಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಬೇಕು ಎಂದು ಅಥಣಿ ಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಬಿಜೆಪಿಗೆ ಭ್ರಷ್ಟ ಎಂಬ ಲೇಬಲ್‌ ತಂದಿದ್ದೇ ವಿಜಯೇಂದ್ರ. ಅವರು ಅಧ್ಯಕ್ಷರಾಗಿದ್ದಕ್ಕೆ ನನ್ನ ವಿರೋಧವಿದೆ. ನಾನು ಬಿ.ಎಸ್. ಯಡಿಯೂರಪ್ಪ ಅವರನ್ನು ವಿರೋಧಿಸಲ್ಲ ಎಂದರು.

ರಾಜ್ಯದಲ್ಲಿ 120ರಿಂದ 130 ಸ್ಥಾನ ಗೆಲ್ಲಿಸಿಕೊಂಡು ಬರುವ ಶಕ್ತಿ ನಮ್ಮಲ್ಲಿದೆ. ಸಾಮೂಹಿಕ ನಾಯಕತ್ವ ಕೊಡಿ. ವಿಫಲ ವಾದರೆ, ಪಕ್ಷದಿಂದ ಹೊರಹಾಕಿ ಎಂದಿದ್ದೇವೆ ಎಂದರು.

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Author Image

Advertisement