'ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ'- ಸಿಎಂ ಸಿದ್ದರಾಮಯ್ಯ
12:09 PM Apr 28, 2024 IST
|
Bcsuddi
Advertisement
ಬೆಂಗಳೂರು: ಬರ ಪರಿಹಾರಕ್ಕೆ 18,771 ಕೋಟಿ ರೂ. ಹಣ ಕೇಳಿದ್ದೇವೆ. ನಾವು 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ಅಶೋಕ್, ಬೊಮ್ಮಾಯಿ,ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ. ಈಗ ಜೆಡಿಎಸ್ ಕೂಡಾ ಸೇರಿಸಿಕೊಂಡು ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರವನ್ನು ಬಿಡುಗಡೆ ಮಾಡಿದ್ದನ್ನು ಖಂಡಿಸಿ ಚೊಂಬು ಹಿಡಿದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾವು ರೈತರಿಗಾಗಿ ಹಣ ಕೇಳಿದ್ದು, ಗ್ಯಾರಂಟಿಗಾಗಿ ಹಣ ಕೇಳಿಲ್ಲ ಮತ್ತು ಕೇಳುವುದು ಇಲ್ಲ ಎಂದರು.
ನರೇಗಾ ಮಾನವ ದಿನ ಹೆಚ್ಚಳವಾಗಿಲ್ಲ. ರಾಜ್ಯದ ಜನರಿಗೆ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ. ಎಲ್ಲಾ ವಿಷಯಗಳಲ್ಲಿ ಅನ್ಯಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
Next Article