For the best experience, open
https://m.bcsuddi.com
on your mobile browser.
Advertisement

ಬಿಜೆಪಿಗೆ ಆರಂಭಿಕ ಮುನ್ನಡೆ – ವಿಜಯೋತ್ಸವಕ್ಕೆ ಭರ್ಜರಿ ಸಿದ್ಧತೆ

10:04 AM Jun 04, 2024 IST | Bcsuddi
ಬಿಜೆಪಿಗೆ ಆರಂಭಿಕ ಮುನ್ನಡೆ – ವಿಜಯೋತ್ಸವಕ್ಕೆ ಭರ್ಜರಿ ಸಿದ್ಧತೆ
Advertisement

ನವದೆಹಲಿ:2024ರ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಎನ್‌ಡಿಎ ಮೈತ್ರಿ ಕೂಟ ಆರಂಭಿಕ ಮುನ್ನಡೆ ಸಾಧಿಸಿದೆ. ಈಗಾಗಲೇ ದೇಶದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ.

ಗೆಲುವಿನ ವಿಶ್ವಾಸದಲ್ಲಿರುವ ಎನ್‌ಡಿಎ ಕೂಟ ಫಲಿತಾಂಶ ಪ್ರಕಟವಾಗುವ ಮುನ್ನವೇ ವಿಜಯೋತ್ಸವಕ್ಕೆ ಭರ್ಜರಿ ಸಜ್ಜಾಗಿದೆ.ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬೃಹತ್‌ ಔತಣ ಕೂಟಕ್ಕೆ ತಯಾರಿ ನಡೆದಿದೆ. ಇನ್ನೂ ಬಿಹಾರದ ಪಾಟ್ನಾದಲ್ಲಿ 400 ಕೆಜಿ ಲಡ್ಡು ಸಿದ್ಧಗೊಳಿಸಿದ್ದಾರೆ. ಮುಂಬೈ, ಆಗ್ರಾ ಮತ್ತು ಭೋಪಾಲ್‌ ಸೇರಿದಂತೆ ಹಲವೆಡೆ ಬಿಜೆಪಿ ಕಾರ್ಯಕರ್ತರು ಸಿಹಿ ತಯಾರಿಸಿದ್ದಾರೆ.ಇತ್ತ ಬೆಂಗಳೂರಿನಲ್ಲೂ ಬಿಜೆಪಿ ಕಚೇರಿಯನ್ನ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿದ್ದು, ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ದೇಶಾದ್ಯಂತ ಎನ್‌ಡಿಎ 311 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದು, ಇಂಡಿಯಾ ಒಕ್ಕೂಟ 152 ಹಾಗೂ ಇತರೇ ಪಕ್ಷಗಳು 51 ಕ್ಷೇತ್ರಗಳಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿವೆ. ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ರಾಯ್‌ ಬರೇಲಿ ಹಾಗೂ ವಯನಾಡ್‌ ಎರಡೂ ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದೆ.

Advertisement

Author Image

Advertisement