For the best experience, open
https://m.bcsuddi.com
on your mobile browser.
Advertisement

ಬಿಗ್ ಬಾಸ್ ಸೀಸನ್ 11 ಆವೃತ್ತಿಯಲ್ಲಿ ಮನೆಯಿಂದ Eliminate ಆದ ಮೊದಲ ಸ್ಫರ್ಧಿ ಯಮುನಾ..?

09:56 AM Oct 07, 2024 IST | BC Suddi
ಬಿಗ್ ಬಾಸ್ ಸೀಸನ್ 11 ಆವೃತ್ತಿಯಲ್ಲಿ ಮನೆಯಿಂದ eliminate ಆದ ಮೊದಲ ಸ್ಫರ್ಧಿ ಯಮುನಾ
Advertisement

ಬೆಂಗಳೂರು : ಕನ್ನಡದ ಬಿಗ್ ಬಾಸ್ ಸೀಸನ್ 11 ಆವೃತ್ತಿಯ ಮೊದಲ ವಾರದ ಎಲಿಮಿನೇಷನ್‌ ಎಲ್ಲರ ಗಮನ ಸೆಳೆದಿದೆ. ಸದ್ಯ ಎಲಿಮಿನೇಷನ್‌ ಲಿಸ್ಟ್‌ನಲ್ಲಿ ಗೌತಮಿ ಜಾಧವ್​, ಭವ್ಯಾ ಗೌಡ, ಮಾನಸ ಸಂತೋಷ್​, ಹಂಸ ಪ್ರತಾಪ್​, ಚೈತ್ರಾ ಕುಂದಾಪುರ, ಯಮುನಾ ಶ್ರೀನಿಧಿ, ಮೋಕ್ಷಿತಾ ಪೈ, ಶಿಶಿರ್​ ಶಾಸ್ತ್ರಿ, ಜಗದೀಶ್​ ನಾಮಿನೇಟ್​ ಆಗಿದ್ದಾರೆ.

ಈ ಪೈಕಿ ಗೌತಮಿ, ಭವ್ಯಾ ಹಾಗೂ ಮನಸ ಅವರನ್ನು ಶನಿವಾರದ ಸಂಚಿಕೆಯಲ್ಲಿ ಸೇವ್​​ ಮಾಡಲಾಗಿದೆ. ಹಂಸ ಪ್ರತಾಪ್​, ಚೈತ್ರಾ ಕುಂದಾಪುರ, ಯಮುನಾ ಶ್ರೀನಿಧಿ, ಮೋಕ್ಷಿತಾ ಪೈ, ಶಿಶಿರ್​ ಶಾಸ್ತ್ರಿ, ಜಗದೀಶ್​ ಡೇಂಜರ್​ ಜೋನ್​ನಲ್ಲಿದ್ದು, ಬಲ್ಲ ಮೂಲಗಳ ಪ್ರಕಾರ ನಟಿ ಯಮುನಾ ಶ್ರೀನಿಧಿ ಎಲಿಮಿನೇಟ್​ ಆಗಿರುವ ಮೊದಲ ಕಂಟೆಸ್ಟಂಟ್​ ಎಂದು ಹೇಳಲಾಗಿದೆ. ಅತಿ ಕಡಿಮೆ ವೋಟ್​ ಪಡೆದಿರುವ ಕಾರಣ ಯಮುನಾ ಶ್ರೀನಿಧಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಆದರೆ, ಅಂತಿಮವಾಗಿ ಇಂದಿನ ಸಂಚಿಕೆ ಪ್ರಸಾರವಾಗುವರೆಗೂ ಕಾಯಬೇಕಿದೆ.ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್ ​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು.

Advertisement
Author Image

Advertisement