ಬಿಎಲ್ ಸಂತೋಷ್ ಬಂಧನಕ್ಕೆ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಸಂಚು..! ಫೋನ್ ಕದ್ದಾಲಿಕೆ ಕೇಸ್ ನಲ್ಲಿ ಸತ್ಯ ಬಯಲು..!
05:28 PM May 29, 2024 IST | Bcsuddi
Advertisement
ಹೈದರಾಬಾದ್ : ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್. ಸಂತೋಷ್ ಅವರನ್ನು ಬಂಧಿಸಿ, ಆ ಮೂಲಕ ದೆಹಲಿ ಸರಕಾರದ ಅಬಕಾರಿ ಹಗರಣದಲ್ಲಿ ಆರೋಪಿಯಾಗಿರುವ ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಪುತ್ರಿ ಕೆ.ಕವಿತಾ ಅವರ ಮೇಲಿನ ಎಲ್ಲಾ ಕೇಸುಗಳನ್ನು ಹಿಂಪಡೆಯುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಕೆಸಿಆರ್ ನಿರ್ಧರಿಸಿದ್ದರೆಂಬ ವಿಚಾರವನ್ನು ತೆಲಂಗಾಣದ ಪೊಲೀಸ್ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತೆಲಂಗಾಣದ ಫೋನ್ ಕದ್ದಾಲಿಕೆ ಪ್ರಕರಣದ ವಿಚಾರಣೆ ವೇಳೆ ಅವರು ಈ ವಿಚಾರ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. ಹೌದು ಮಾರ್ಚ್ ನಲ್ಲಿ ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ ಪಿ ರಾಧಾಕೃಷ್ಣ ರಾವ್ ಅವರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು.
ಸಿಎಂ (ಚಂದ್ರಶೇಖರ್ ರಾವ್) ಹಾಗೂ ಅವರ ಆಪ್ತ ವಲಯದ ಆದೇಶದ ಮೇರೆಗೆ, ಬಿಆರ್ ಎಸ್ (ಅಂದಿನ ಟಿಆರ್ ಎಸ್) ಹಾಗೂ ಆ ಪಕ್ಷದ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕುತ್ತಿದ್ದೆ ಎಂದು ತಮ್ಮ ತಪ್ಪೊಪ್ಪಿಗೆಯಲ್ಲಿ ರಾಧಾಕೃಷ್ಣ ರಾವ್ ತಿಳಿಸಿದ್ದಾರೆ.
Advertisement