For the best experience, open
https://m.bcsuddi.com
on your mobile browser.
Advertisement

ಬಿಎಂಟಿಸಿ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

07:32 AM Feb 29, 2024 IST | Bcsuddi
ಬಿಎಂಟಿಸಿ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Advertisement

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2,500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.

Advertisement

ರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ನೇಮಕಾತಿ ಪ್ರಕ್ರಿಯೆಯ ಹೊಣೆ ಹೊತ್ತಿದ್ದು, ಈ ಕುರಿತು ಇತ್ತೀಚಿಗೆ ವಿವರವಾದ ಅಧಿಸೂಚನೆ ಹೊರಡಿಸಿದೆ.

BMTC ಮಿಕ್ಕುಳಿದ ವೃಂದದಲ್ಲಿ 2286 (ಆರ್ಪಿಸಿ) ಹಾಗೂ ಸ್ಥಳೀಯ ವೃಂದ (ಹೈ–ಕ) 214 ಹುದ್ದೆಗಳಿದ್ದು ಒಟ್ಟಾರೆಯಾಗಿ ಮಹಿಳೆಯರಿಗೂ 825 ಹುದ್ದೆಗಳು ಮೀಸಲಿವೆ.

ಪಿಯುಸಿ, ಸಿಬಿಎಸ್ಸಿ 10+2, ಮೂರು ವರ್ಷದ ಡಿಪ್ಲೋಮಾ ಅಥವಾ ಅದಕ್ಕೆ ಸಮಾನವಾದ ಶೈಕ್ಷಣಿಕ ಅರ್ಹತೆ ಜೊತೆಗೆ ‘ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್’ ಅನ್ನು ಹೊಂದಿದವರು ಅರ್ಜಿ ಸಲ್ಲಿಸಬಹುದು. ಬಾಹ್ಯ ಕೋರ್ಸ್ ಮತ್ತು ಜೆಒಸಿ ಕೋರ್ಸ್ ಮುಗಿಸಿದವರು ಅರ್ಹರಲ್ಲ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ಸಾಮಾನ್ಯ ವರ್ಗದವರಿಗೆ 35 ವರ್ಷಗಳು, 2ಎ, 2ಬಿ, 3ಎ, 3ಬಿ ಗಳಿಗೆ 38 ವರ್ಷಗಳು, ಎಸ್ಸಿ, ಎಸ್ಟಿ, ಪ್ರವರ್ಗ–1 ದವರಿಗೆ 40 ಹಾಗೂ ಮಾಜಿ ಸೈನಿಕರಿಗೆ 45 ವರ್ಷದವರೆಗೆ ಮಿತಿ ಇದೆ.

ಮಾರ್ಚ್ 10 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದ್ದು ಏಪ್ರಿಲ್ 10 ರಂದು ಮುಕ್ತಾಯವಾಗಲಿದೆ. cetonline.karnataka.gov.in ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬೇಕು.

Tags :
Author Image

Advertisement